Saturday, April 20, 2024
spot_imgspot_img
spot_imgspot_img

ದಕ್ಷಿಣ ಕನ್ನಡ ಕೋಟೆಕಾರು ಪಟ್ಟಣ ಪಂಚಾ​ಯಿತಿ ಎರಡನೇ ಅವಧಿ ಅಧ್ಯಕ್ಷರಾಗಿ ಬಿಜೆಪಿಯ ಜಯಶ್ರೀ ಪ್ರಪುಲ್ಲದಾಸ್ ಅವಿರೋಧ ಆಯ್ಕೆ

- Advertisement -G L Acharya panikkar
- Advertisement -

ಉಳ್ಳಾಲ(ನ6): ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೆ ಖಾಲಿಯಿದ್ದ ಕೋಟೆಕಾರು ಪಟ್ಟಣ ಪಂಚಾಯತ್​​ಗೆ ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ನೂತನ ಅಧ್ಯಕ್ಷರಾಗಿ ಗುರುವಾರ ಅವಿರೋಧ ಆಯ್ಕೆಯಾದರು.

 ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದೇ ಎರಡು ವರ್ಷಗಳ ಕಾಲ ಉಪಾಧ್ಯಕ್ಷರ ಹೆಗಲಿಗೆ ಪಟ್ಟಣ ಪಂಚಾಯತ್​ ಆಡಳಿತವನ್ನು ವಹಿಸಲಾಗಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು.ಎರಡು ವರ್ಷಗಳ ಹಿಂದೆ ಎಸ್ಟಿ ಮಹಿಳೆಗೆ ಮೀಸಲಾತಿ ಬಂದಿರುವುದರಿಂದ ಬಿಜೆಪಿಯಿಂದ ಅಭ್ಯರ್ಥಿ ಇರಲಿಲ್ಲ. ಆದ್ದರಿಂದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ನಡೆದಿತ್ತು.

ಬಿಜೆಪಿ ಬೆಂಬಲಿತ 11, ಕಾಂಗ್ರೆಸ್-4 ಎಸ್​​​ಡಿಪಿಐ-1 ಹಾಗೂ ಸಿಪಿಎನ 1 ಅಭ್ಯರ್ಥಿ ಚುನಾಯಿತರಾಗಿದ್ದರು. ಇದೀಗ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷರ ಆಯ್ಕೆ ನಡೆದರೂ ಕೇವಲ ಆರು ತಿಂಗಳಿಗೆ ಮಾತ್ರ ಅಧಿಕಾರಾವಧಿ ಇರಲಿದೆ.

- Advertisement -

Related news

error: Content is protected !!