Sunday, July 26, 2026
spot_imgspot_img
spot_imgspot_img

ಕೋಝಿಕ್ಕೋಡ್ :ಯುವತಿಯನ್ನು ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ!!

- Advertisement -
- Advertisement -

ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಡಂಪತ್ತುತಲಂನಲ್ಲಿ ವ್ಯಕ್ತಿಯೊಬ್ಬ ತನ್ನ ಮದುವೆಯನ್ನು ಮರೆಮಾಚಿ ಮಹಿಳೆ ಜತೆ ಸಂಬಂಧ ಬೆಳೆಸಿ, ಬಳಿಕ ಆಕೆಯನ್ನು ಹತ್ಯೆಗೈದ ನಂತರ ಅತ್ಯಾಚಾ‌ರವೆಸಗಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿರುವ ಘಟನೆ ನಡೆದಿದೆ.

ತಾಡಂಪತ್ತುತಲಂ ನಿವಾಸಿ, ವೈಶಾಖನ್(36) ಹತ್ಯೆಗೈದ ಆರೋಪಿ. ವಿವಾಹಿತನಾಗಿದ್ದ ವೈಶಾಖನ್, ತನ್ನ ಮದುವೆಯಾಗಿರುವ ಮತ್ತು ಇಬ್ಬರು ಮಕ್ಕಳೂ ಇರುವ ವಿಷಯವನ್ನು ಮುಚ್ಚಿಟ್ಟು 26 ವರ್ಷದ ಯುವತಿಯೊಂದಿಗೆ ಪ್ರೇಮ ನಾಟಕವಾಡಿದ್ದನು. ಕಾಲಕ್ರಮೇಣ ಈತನಿಗೆ ವಿವಾಹವಾಗಿರುವ ವಿಷಯ ಯುವತಿಗೆ ತಿಳಿದು ಬಂದಿದ್ದು, ಈ ಕಾರಣಕ್ಕೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಬಳಿಕ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು.

ಎರಡು ದಿನಗಳ ಹಿಂದೆ ವೈಶಾಖನ್ ತನ್ನ ಕಾರ್ಯಗಾರಕ್ಕೆ ಯುವತಿಯನ್ನು ಕರೆಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ನಾಟಕ ಮಾಡಿದ್ದ. ಆತನನ್ನು ತೆಡೆಯಲು ಮುಂದಾದ ಯುವತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಯುವತಿ ಮೃತಪಟ್ಟ ನಂತರ ಆರೋಪಿಯು ಆಕೆಯ ಶವದ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರ ಮಧ್ಯೆ ಜಗಳ ನಡೆದಿರುವುದು ತಿಳಿದು ಬಂದಿದೆ. ಶಂಕೆಯ ಆಧಾರದ ಮೇಲೆ ವೈಶಾಖನ್‌ನನ್ನು ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ವರದಿ ಮೂಲಕ ತಿಳಿದುಬಂದಿದೆ..

- Advertisement -

Related news

error: Content is protected !!