Wednesday, April 23, 2025
spot_imgspot_img
spot_imgspot_img

ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಪೂಡಾ ) ಅಧ್ಯಕ್ಷರಾಗಿ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ನೇಮಕ

- Advertisement -
- Advertisement -

ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಪೂಡಾ) ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಕೆಪಿಸಿಸಿ ವಕ್ತಾರ, ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ಪ್ರಧಾನ ಸಂಚಾಲಕ, ಕೊಳ್ತಿಗೆ ಗ್ರಾಮದ ಅಮಳ ನಿವಾಸಿ ಅಮಳ ರಾಮಚಂದ್ರ ನೇಮಕವಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ನ್ಯಾಯಾವಾದಿ ಭಾಸ್ಕರ ಕೋಡಿಂಬಾಳರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಗರಾಭಿವೃದ್ದಿ ಇಲಾಖೆಯ ಅದೀನ ಕಾರ್ಯದರ್ಶಿ ಲತಾ ಕೆ.ರವರು ರಾಜ್ಯಪಾಲರ ಅಜ್ಞಾನುಸಾರ ಮಾ 13ರಂದು ಆದೇಶ ಹೊರಡಿಸಿದ್ದಾರೆ. ಶಾಸಕ ಅಶೋಕ್ ರೈಯವರು ಅಮಳ ರಾಮಚಂದ್ರರವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.

ಕೊಳ್ತಿಗೆ ಸೌಹಾರ್ದ ಸಮಿತಿಯ ಕಾರ್ಯಾಧ್ಯಕ್ಷ, ಪುತ್ತೂರು ಎಸ್ ಡಿಎಂಸಿ ಒಕ್ಕೂಟದ ಅಧ್ಯಕ್ಷ, ಮೆಡಿಕಲ್‌ ಕಾಲೇಜ್ ಹೋರಾಟ ಸಮಿತಿಯ ಪ್ರಮುಖ ನಾಯಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ಸ್ಥಾಪಕ ಪ್ರಧಾನ ಸಂಚಾಲಕರಾಗಿ 8 ವರ್ಷಗಳ ಕಾರ್ಯ ನಿರ್ವಹಿಸಿದ್ದರು. ಇದೀಗ 2024ರಲ್ಲಿ ಮತ್ತೆ ಪ್ರಧಾನ ಸಂಚಾಲಕರಾಗಿ ನೇಮಕಗೊಂಡಿದ್ದರು.

ಅಮಳ ನಿವಾಸಿ ಅಮಳ ರಾಮಚಂದ್ರ ಅವರು ಕಳೆದ ವರ್ಷದಿಂದ ಮಗನ ವಿದ್ಯಾಭ್ಯಾಸದ ನಿಮಿತ್ತ ಪುತ್ತೂರಿನಲ್ಲಿ ಎಪಿಎಂಸಿ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

- Advertisement -

Related news

error: Content is protected !!