Friday, March 29, 2024
spot_imgspot_img
spot_imgspot_img

ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪದ ವಿದ್ಯುತ್ ಬಿಲ್-ವಿಟ್ಲದಲ್ಲಿ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಪ್ರಸ್ತುತ ಮೆಸ್ಕಾಂ ಇಲಾಖೆ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡದೇ ವಿದ್ಯುತ್ ಗ್ರಾಹಕರಿಗೆ ತೊಂದರೆ ಯಾಗುತ್ತಿದ್ದು, ಈ ಬಗ್ಗೆ ಮೆಸ್ಕಾಂ ಇಲಾಖೆ ಮತ್ತು ಸರ್ಕಾರದ ಬೇಜಾಬ್ದಾರಿಯನ್ನು ಖಂಡಿಸಿ ಬಂಟ್ವಾಳ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿ ವತಿಯಿಂದ ವಿಟ್ಲ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಪ್ರತಿಭಟನೆ ನಡೆಯಿತು. ಸಮಿತಿ ಗೌರವಾಧ್ಯಕ್ಷ ರಮಾನಾಥ ವಿಟ್ಲ ಮಾತನಾಡಿ
ಮೆಸ್ಕಾ ಇಲಾಖೆ ತಮ್ಮ ಬಳಕೆದಾರರಿಗೆ ಕಳೆದ ಕೆಲ‌ಸಮಯಗಳಿಂದ  ಬಿಲ್ ನೀಡಿಲ್ಲ. ಇದರಿಂದಾಗಿ ಬಡ ಹಾಗೂ ಮಾಧ್ಯಮದ ಕುಟುಂಭಗಳಿಗೆ ತುಂಭಾ ಸಮಸ್ಯೆಯಾಗಿದೆ ಎಂದರು.

ಸಮಿತಿ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮಾತನಾಡಿ
ಸರಕಾರದಿಂದ ಟೆಂಡರ್ ಪಡೆದುಕೊಂಡಿರುವ ವ್ಯಕ್ತಿಗಳು ಈ ಹಿಂದೆ ಇದ್ದ ಮಾಪಕ ಓದುಗರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಆ ಬಳಿಕ ಅವರಿಗೆ ಸರಿಯಾಗಿ ಸಂಬಳವನ್ನು ನೀಡದೆ ಅರ್ದಕ್ಕೆ ಕೆಲಸದಿಂದ ಬಿಟ್ಟು, ಹೊಸಬರನ್ನು ನೇಮಕ ಮಾಡಿದ್ದಾರೆ ಎಂದು ದೂರಿದರು.

ಈ ಸಂದರ್ಭ ಗೌರವಾಧ್ಯಕ್ಷ ಮಾರಪ್ಪ ಸುವರ್ಣ ಕೆದಿಲ, ಉಪಾಧ್ಯಕ್ಷ ಮಹಮ್ಮದ್ ಕಡಂಬು, ಪ್ರಸಾದ್ ಬೊಳ್ಮಾರ್, ಸಂಚಾಲಕ ರಮೇಶ್ ಕಡಂಬು, ಪ್ರಧಾನ ಕಾರ್ಯದರ್ಶಿ ನೌಫಲ್ ಕೆಬಿಯಸ್ ಕುಡ್ತಮುಗೇರು, ಜತೆ ಕಾರ್ಯದರ್ಶೀ ಬಿ.ಕೆ ಪ್ರಸಾದ್ ಅನಂತಾಡಿ, ಸಂಘಟನಾ ಕಾರ್ಯದರ್ಶಿಗಳಾದ ರಾಮಣ್ಣ ಪಿಲಿಂಜ, ರಮೇಶ್ ಕುದ್ರೆಬೆಟ್ಟು, ಸೋಮನಾಥ ಗಡಿಯಾರ, ಸೋಮಪ್ಪ ನಾಯ್ಕ ಪುಣಚ, ಗಂಗಯ್ಯ ಅನಂತಾಡಿ, ಸೋಮಪ್ಪ ಸುರುಳಿಮೂಲೆ, ಗಣೇಶ್ ಸೀಗೆಬಲ್ಲೆ, ವಿಶ್ವನಾಥ ಮಾಣಿ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!