- Advertisement -
- Advertisement -


ಸವಣೂರು : ಬಸ್ ನಿಲ್ಲಿಸಲಿಲ್ಲವೆಂದು ಗುತ್ತಿಗೆ ಆಧಾರದಲ್ಲಿ ನೇಮಕವಾದ ಬಸ್ ಚಾಲಕನಿಗೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಸವಣೂರಿನಲ್ಲಿ ನಡೆದಿದೆ.
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ನಾರಾಯಣ ಎಂಬವರಿಗೆ ಬಸ್ ನಿಲ್ದಾಣ ಸಮೀಪ ಬಸ್ ನಿಲ್ಲಿಸಲಿಲ್ಲ ಬಸ್ ರಶ್ ಇದ್ದುದರಿಂದ ಅವರು ಬಸ್ ನಿಲ್ಲಿಸಲಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸಿಟ್ಟಾದ ಅಧಿಕಾರಿ ನನಗೇ ನೀನು ಬಸ್ ನಿಲ್ಲಿಸುತ್ತಿಲ್ಲ ಎಂದು ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಬಸ್ ಡ್ರೈವರ್ ಆರೋಪಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಚಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬಸ್ ನಲ್ಲಿದ್ದ ಸಹಪ್ರಯಾಣಿಕರು ಘಟನೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ವೀಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -