ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್‌ಗಳಲ್ಲಿ ಸಾಗಿಸುವ ಲಗೇಜುಗಳ ಪರಿಷ್ಕೃತ ದರ ನಾಳೆ(ಫೆ.16)ಯಿಂದ ಜಾರಿಗೆ ಬರಲಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.ಪ್ರತಿ ಬಾರಿಯೂ ಲಗೇಜು ದರ ಏರಿಕೆ ಬಸ್ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. 2025ರಂದು ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಿತ್ತು. ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ.
ಆದ್ದರಿಂದ ಫೆ.16ರಿಂದ ಜಾರಿಗೆ ಬರುವಂತೆ ಲಗೇಜು ದರವನ್ನು ಏರಿಕೆ ಮಾಡಲಾಗಿದೆ.30 ಕೆಜಿ ವರೆಗೂ ಉಚಿತವಾಗಿದ್ದು, 30 ಕೆಜಿ ಮೇಲೆ ದರ ಅನ್ವಯಿಸುತ್ತದೆ. 1 ರಿಂದ 5 ನೇ ಸ್ಟೇಜ್ ವರೆಗೆ 6.ರೂ, 6ರಿಂದ 10ರ ವರೆಗೆ 12 ರೂ. 11ರಿಂದ 15ನೇ ಸ್ಟೇಜ್ ವರೆಗೆ 20 ರೂ., 156 ರಿಂದ 160 ಸ್ಟೇಜ್ ವರೆಗೆ 145 ರೂ. ದರ ನಿಗದಿ ಮಾಡಲಾಗಿದೆ.
ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟೇ ಲಗೇಜು ದರವೂ ಹೆಚ್ಚಾಗುತ್ತದೆ ಅಂದರೆ ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಾಗಿತ್ತು, ಲಗೇಜು ದರವು ಶೇ.15ರಷ್ಟು ಹೆಚ್ಚಾಗಿದೆ. ಈ ಹಿಂದೆ ಲಗೇಜು ದರವನ್ನು 2021ರ ಡಿಸೆಂಬರಲ್ಲಿ ಏರಿಕೆ ಮಾಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.









