Thursday, June 18, 2026
spot_imgspot_img
spot_imgspot_img

ಕೆಎಸ್‌ಆರ್‌ಟಿಸಿ ಬಸ್-ಟ್ರಕ್ ಮುಖಾಮುಖಿ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ..!

- Advertisement -
- Advertisement -

ಸಾಗರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ನಡೆದಿದೆ.

ಸಾಗರದಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆನಂದಪುರದಿಂದ ಸಾಗರದ ಕಡೆ ತೆರಳುತ್ತಿದ್ದ ಟ್ರಕ್‌ ಮುಖಾಮುಖಿ ಢಿಕ್ಕಿಯಾಗಿದೆ. ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮರ್ಕಝ್ ಶಾಲಾ ಬಸ್‌ನ ಚಾಲಕ ಝಿಯಾವುಲ್ಲಾ ಗಾಯಳುಗಳನ್ನು ಆನಂದಪುರ ಆಸ್ಪತ್ರೆಗೆ ಶಾಲಾ ಬಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಘಟನಾ ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿದ್ದಾರೆ. ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿದ್ದು ಪೊಲೀಸರು ಸಂಚಾರ ತೆರವುಗೊಳಿಸಿದರು.

- Advertisement -

Related news

error: Content is protected !!