- Advertisement -
- Advertisement -
ವಿಟ್ಲ: ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ದಿಢೀರ್ ಮುಷ್ಕರಕ್ಕೆ ವಿಟ್ಲದಲ್ಲಿ ಬೆಂಬಲ ವ್ಯಕ್ತವಾಗಿದೆ.
ವಿಟ್ಲದಲ್ಲಿ ಬೆಳಿಗ್ಗೆನಿಂದಲೇ ನೌಕರರು ಕರ್ತವ್ಯ ಹಾಜರಾಗಿಲ್ಲ. ವಿಟ್ಲ ಕೆ.ಎಸ್ ಆರ್ ಸಿ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಪ್ರಾರಂಭಿಸದೇ ನಿಂತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ವಿಟ್ಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ ಇರುವುದರಿಂದ ಹಲವು ಪ್ರಯಾಣಿಕರು ಖಾಸಗಿ ಬಸ್ಸಿನ ಮೂಲಕ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದಾರೆ.
ನಿನ್ನೆ ಎಂದಿನಂತೆ ಬಸ್ ಸಂಚಾರ ನಡೆಯುತ್ತಿದ್ದು, ಇಂದು ಬೆಳಿಗ್ಗೆನಿಂದಲೇ ಈ ತೀರ್ಮಾನಕ್ಕೆ ಬಂದಿದ್ದಾರೆ. ಬೆಂಗಳೂರು ತೆರಳುವ ಬಸ್ ನಿನ್ನೆ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಿದೆ.
ಬಸ್ ಬಂದ್ ಮಾಡಿದ್ದರ ಕುರಿತು ಕೆಎಸ್‌ಅರ್‌ಟಿಸಿ ಅಧಿಕಾರಿಗಳಲ್ಲಿ ವಿಚಾರಿಸಿದರೆ ಅವರು ತಮ್ಮ ಅಸಹಾಯಕತೆ ಹಾಗೂ ಸಮಸ್ಯೆಗಳನ್ನು ವ್ಯಕ್ತಪಡಿಸಿದರು.
- Advertisement -