Monday, August 31, 2026
spot_imgspot_img
spot_imgspot_img

ಕುಡ್ತಮುಗೇರು: ಅಕ್ರಮ ಕೆಂಪುಕಲ್ಲು ಸಾಗಾಟ- ಲಾರಿ ಪೊಲೀಸ್ ವಶ- ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ತಪಾಸಣೆ ವೇಳೆ ಲಾರಿಯಲ್ಲಿ ಕೆಂಪು ಕಲ್ಲು ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡುಬಂದಿದ್ದು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಕುಡ್ತಮುಗೇರು ಎಂಬಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ರತ್ನಕುಮಾರ್, ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬೋಳ್ಪದೆ ಕಡೆಯಿಂದ ಕೂಡ್ತಮುಗೇರು ಕಡೆಗೆ ಬರುತ್ತಿದ್ದ KA-12-A-9095 ನೋಂದಣಿಯ ಲಾರಿಯಲ್ಲಿ ಕೆಂಪು ಕಲ್ಲು ತುಂಬಿಸಿ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಲಾರಿ ಚಾಲಕ ಎನ್.ಸಿ.ಶರೀಪ್ (42) ಎಂಬಾತನಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳ ಸಾಗಾಟ ಕಂಡುಬಂದಿರುತ್ತದೆ.

ಲಾರಿ ಚಾಲಕ ಹಾಗೂ ಲೋಡ್ ಸಮೇತ ಲಾರಿಯನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!