Saturday, June 13, 2026
spot_imgspot_img
spot_imgspot_img

ಕುಂಬಳೆ: ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸಂಬಂಧಿಕರಿಂದ ಬೆದರಿಕೆ; ಯುವಕ ನೇಣಿಗೆ ಶರಣು..!!

- Advertisement -
- Advertisement -

ಕುಂಬಳೆ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೇರೂರು ಪಣಿಯೂರಿನಲ್ಲಿ ನಡೆದಿದೆ.

ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಹೇರೂರು ಪಣಿಯೂರು ನಿವಾಸಿ ರಮೇಶ್ ಶೆಟ್ಟಿ ಅವರ ಪುತ್ರ ನವದೀಪ್ ಪಿ. (26) ಮೃತ ದುರ್ದೈವಿ.

ನವದೀಪ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಈ ಕಾರಣಕ್ಕೆ ಯುವತಿಯ ಸಂಬಂಧಿಕರು ಕರೆ ಮಾಡಿ ಬಂದ್ಯೋಡ್‌ ಎಂಬಲ್ಲಿಗೆ ಬರುವಂತೆ ಹೇಳಿದ್ದು, ಅಲ್ಲಿಗೆ ತಲುಪಿದಾಗ ಮೂವರ ತಂಡ ನವದೀಪ್ ಅವರ ಬೈಕ್ ತಡೆದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗಿದ್ದ ನವದೀಪ್ ಬೆಳಗ್ಗೆ ಕಾಣೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮರದಲ್ಲಿ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯುವತಿಯ ಸಂಬಂಧಿಕರ ಬೆದರಿಕೆಯಿಂದಾಗಿ ನವದೀಪ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!