- Advertisement -
- Advertisement -





ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ವಿಷ್ಣುನಗರ ಇದರ ವಾರ್ಷಿಕ ಜಾತ್ರೋತ್ಸವ ಫೆಬ್ರವರಿ ತಿಂಗಳಿನ 12 ಮತ್ತು 13 ರಂದು ಹಾಗೂ 10 ನೇ ತಾರೀಕಿನಂದು ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕಟ್ನಾಜೆ, ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡೆ, ಸಂಘಟನಾ ಕಾರ್ಯದರ್ಶಿ ಯತೀಶ್ ಹಡೀಲು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಬೆಳಿಯಪ್ಪ ಗೌಡ ಮಾರ್ಪು, ಕೋಶಾಧಿಕಾರಿ ಲಿಂಗಪ್ಪ ಗೌಡ ಅರ್ಕಲ್ ತೋಟ, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಪಿಲಿಪ್ಪೆ ಹಾಗೂ ದಯಾನಂದ ಶೆಟ್ಟಿ ಉಜಿರೆಮಾರ್, ಮನೋಜ್ ಕಂಪ, ಜನಾರ್ದನ ಕಾರ್ಯಾಡಿ,ಪುರಂದರ ಶೆಟ್ಟಿ ಬರೆ, ಕೃಷ್ಣಪ್ಪ ಮರುವಾಳ, ಮೋಹಿನಿ ಎಣ್ಣೆದಕಲ, ವಿಜಯಲಕ್ಷ್ಮಿ ಪಿಲಿಪ್ಪೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -








