Monday, July 20, 2026
spot_imgspot_img
spot_imgspot_img

ಕುಂಡಡ್ಕ: ಎಸ್‌‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕ 100% ಫಲಿತಾಂಶ

- Advertisement -
- Advertisement -

ಕುಂಡಡ್ಕ: 2025ನೇ ಸಾಲಿನ ಎಸ್‌‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗುಣಶ್ರೀ ವಿದ್ಯಾಲಯ ಕುಳ – ಕುಂಡಡ್ಕ ಶಾಲೆ ಶೇಕಡ 100% ಫಲಿತಾಂಶ ಪಡೆದುಕೊಂಡಿದೆ. ಕರ್ನಾಟಕ ಸರಕಾರ ಮಾಜಿ ಸಚಿವ ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾನ್ ದೇವ್ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಈ ಶಾಲೆಯು ಸತತ ಕೆಲವು ವರ್ಷಗಳಿಂದದಾಖಲೆಯ ಫಲಿತಾಂಶವನ್ನು ಪಡೆದಿರುತ್ತದೆ.

ಪ್ರತೀಕ್ಷಾ 587 ಅಂಕಗಳು, ಯಶಸ್ವಿ 582, ಭವಿಷ್‌ 541, ಯಶಸ್ವಿನಿ 531 ಅಂಕಗಳನ್ನು ಗಳಿಸಿ ವಿಶಿಷ್ಟ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.

ಬಹುತೇಕ ಗ್ರಾಮೀಣ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯು ಉತ್ತಮ ಫಲಿತಾಂಶ ಪಡೆಯಲು ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಶಾಲಾ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ ಅಭಿನಂದಿಸಿದ್ದಾರೆ.

- Advertisement -

Related news

error: Content is protected !!