Wednesday, August 5, 2026
spot_imgspot_img
spot_imgspot_img

ಕುಂದಾಪುರ: ಸಿಡಿಲು ಬಡಿದು ಹೊಯ್ಗೆ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತ್ಯು..!

- Advertisement -
- Advertisement -

ಕುಂದಾಪುರ: ಇದ್ದಕ್ಕಿದ್ದಂತೆ ಸುರಿದ ಮಳೆ ಗಾಳಿ ಹಾಗೂ ಸಿಡಿಲಿಗೆ ಹೊಯ್ಗೆ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಕುಂದಾಪುರ ದಂಗಾಗಿದ್ರೆ ತಾಲೂಕಿನ ಕಂಡ್ಲೂರು ಸಮೀಪ ಹಳ್ನಾಡ್ ಹೊಳೆಯಲ್ಲಿ ನಡೆದಿದೆ.

ಕಾರ್ಮಿಕನನ್ನು ಉತ್ತರ ಪ್ರದೇಶದ ಮೂಲದ ದೀಪ್ ಚಂದ್ (38) ಎಂದು ಗುರುತಿಸಲಾಗಿದೆ.

ಹಳ್ನಾಡ್ ಹೊಳೆಯ ಹೊಯ್ಗೆ ಧಕ್ಕೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ದೋಣಿಯಿಂದ ಹೊಯ್ಗೆ ಖಾಲಿ ಮಾಡುತ್ತಿದ್ದ ಸಂದರ್ಭ ಸಿಡಿಲು ಬಡಿತಕ್ಕೆ ದೀಪ್ ಚಂದ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಮತ್ತೊರ್ವ ಕಾರ್ಮಿಕ ಅಲ್ಲೇ ನೀರಿಗೆ ಬಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಕಾರ್ಮಿಕ ಯಾರ ಒಡೆತನದ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದು ಬಹಿರಂಗಗೊಂಡಿಲ್ಲ ,ಇನ್ನು ದೀಪ್ ಚಂದ್ ಮೃತದೇಹವನ್ನು ಕುಂದಾಪುರ ಶವಗಾರದಲ್ಲಿಡಲಾಗಿದೆ. ಘಟನಾ ಸ್ಥಳಕ್ಕೆ ಕಂಡ್ಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಸಿದ್ದಾರೆ.

- Advertisement -

Related news

error: Content is protected !!