Saturday, June 28, 2025
spot_imgspot_img
spot_imgspot_img

ಕುಂದಾಪುರ: ಭಾರೀ ಗಾಳಿ ಮಳೆ- ಮರ ಬಿದ್ದು ಮಹಿಳೆ, ದನ ಸಾವು..!

- Advertisement -
- Advertisement -

ಕುಂದಾಪುರ: ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ, ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ನೀರಿನ ಟ್ಯಾಂಕಿ ಬಳಿ ನಡೆದಿದೆ.

ಮೃತಪಟ್ಟ ಮಹಿಳೆ ಕೆಂಚನೂರು ಗ್ರಾಮದ ಮೈಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಎಂದು ಗುರುತಿಸಲಾಗಿದೆ. ಜೊತೆಗೆ ಅವರ ಮನೆಯ ದನ ಕೂಡ ಸಾವನ್ನಪ್ಪಿದೆ.

ಸುಜಾತಾ ಆಚಾರ್ತಿ ತಮ್ಮ ಮನೆಯ ಹಾಲು ಕರೆಯುವ ಹಸುವನ್ನು ಮನೆ ಸಮೀಪದ ರಸ್ತೆ ಬದಿಯಲ್ಲಿ ಭಾನುವಾರ ಸಂಜೆ ಮೇಯಲೆಂದು ಕಟ್ಟಿದ್ದರು. ವಿಪರೀತ ಗಾಳಿ ಮಳೆ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಂಜೆ ಸುಮಾರು 5.30ಕ್ಕೆ ದನವನ್ನು ಬಿಡಿಸಿ ಕೊಟ್ಟಿಗೆ ತರಲೆಂದು ಹೋಗಿದ್ದರು. ಇದೇ ಸಂದರ್ಭ ಗಾಳಿಗೆ ಮರವು ಮೇಯುತ್ತಿದ್ದ ದನ ಮತ್ತು ಸುಜಾತ ಆಚಾರ್ತಿ ಅವರ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಹಾಗೂ ಸುಜಾತ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಸುಜಾತ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ದುರ್ಮರಣಕ್ಕೊಳಗಾದ ಸುಜಾತಾ ಆಚಾರ್ಯ ಅವರ ಪತಿ ಅಣ್ಣಪ್ಪಯ್ಯ ಆಚಾರಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮೂವರು ಗಂಡು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!