Monday, July 20, 2026
spot_imgspot_img
spot_imgspot_img

ಕುಂದಾಪುರ: ಅಂದ‌ರ್ ಬಾಹರ್ ಅಡ್ಡೆಗೆ ಪೊಲೀಸ್‌ ದಾಳಿ; ಮೂವರ ಬಂಧನ

- Advertisement -
- Advertisement -

ಕುಂದಾಪುರ: ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರಕಾರಿ ಹಾಡಿಯಲ್ಲಿ ಡಿ.20ರಂದು ರಾತ್ರಿ ವೇಳೆ ಅಂದ‌ರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಕೇಶ್(24), ಮ್ಯಾಕ್ಸಿ ರೋಶನ್(39), ಸತೀಶ್(37) ಎಂದು ಗುರುತಿಸಲಾಗಿದೆ.

ಉಳಿದಂತೆ ಪ್ರಕಾಶ, ರಾಜೇಶ್ ಮತ್ತು ಸುಜನ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ 4,450ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!