Thursday, July 23, 2026
spot_imgspot_img
spot_imgspot_img

ಕುಂದಾಪುರ: ಕಟ್ಟಡದ ಮೆಟ್ಟಿಲಿನಿಂದ ಬಿದ್ದು ಕಾರ್ಮಿಕ ಮೃತ್ಯು

- Advertisement -
- Advertisement -

ಕುಂದಾಪುರ: ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೆಟ್ಟಿಲು ಇಳಿಯುತ್ತಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಆಸೋಡು ಗ್ರಾಮದ ಹೂವಿನಕೆರೆ ಮಠ ಎಂಬಲ್ಲಿ ನಡೆದಿದೆ.

ಮೃತರನ್ನು ಜಾರ್ಖಂಡ್ ಮೂಲದ ಜಯಂತ(19) ಎಂದು ಗುರುತಿಸಲಾಗಿದೆ.

ಇವರು ಕಟ್ಟಡದ ಪಿಲ್ಲರ್‌ನ ಕಾಂಕ್ರೀಟ್ ಕಾಮಗಾರಿಯ ಕೆಲಸ ಮಾಡುತ್ತಿದ್ದು ಕಟ್ಟಡದ ಕಾಂಕ್ರಿಟ್ ಕೆಲಸ ನಿರ್ವಹಿಸಿದ ಕಾರಣ ಮೆಟ್ಟಿಲಿನಲ್ಲಿ ನೀರು ಬಿದ್ದಿತ್ತೆನ್ನಲಾಗಿದೆ. ಇವರು ಊಟಕ್ಕಾಗಿ ಕಟ್ಟಡದ ಮೇಲಿನಿಂದ ಮೆಟ್ಟಿಲಿನಲ್ಲಿ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!