
ಕುಂದಾಪುರ: ಹಸುವಿಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟು ಸವಾರರಿಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಾಳಾವರ ಗ್ರಾಮದ ರೈಲ್ವೇ ಸೇತುವೆ ಬಳಿ ನಡೆದಿದೆ.
ಮೃತ ಬೈಕ್ ಸವಾರನನ್ನು ಕನ್ಯಾನದ ಸಮೀಪ ಬೇಡಗುಡ್ಡೆ ನಿವಾಸಿ ಶಿವರಾಮ್ ಕುಲಾಲ್ (35) ಎಂದು ಗುರುತಿಸಲಾಗಿದೆ.

ಶಿವರಾಮ ಅವರು ಬೈಕಿನಲ್ಲಿ ಗುಡ್ಡೆಯಂಗಡಿಯ ಮಹೇಶ (35)ರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸಾಲಿಗ್ರಾಮ ಕಡೆಯಿಂದ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಬರುತ್ತಿದ್ದರು. ರಸ್ತೆಗೆ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದರು. ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಪ್ರಜ್ಞೆ ಹೋದವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ, ಮಹೇಶ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಗಂಭೀರ ಗಾಯಗೊಂಡ ಶಿವರಾಮರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಅವರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕನ್ಯಾನ ಮೂಲದವರಾದ ಶಿವರಾಮ್ ಕುಲಾಲ್ ಪತ್ನಿ ಮನೆಯಾದ ಅಚ್ಲಾಡಿ ಮಧುವನ ಶಾಂತಿನಗರದಲ್ಲಿ ವಾಸವಿದ್ದರು. ಮೃತರು ಪತ್ನಿ , ಮಗು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
- ಜು.22-25: ಮಂಗಳೂರಿನಲ್ಲಿ ಎನ್ಎಸ್ಜಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ-ಸಾರ್ವಜನಿಕರ ಸಹಕಾರಕ್ಕೆ ಡಿ.ಸಿ ಮನವಿ
- ಹಾವು ಕಡಿತಕ್ಕೆ 108 ಆಂಬುಲೆನ್ಸ್ ಮನೆಗೆ ಬಂದು ಇಂಜೆಕ್ಷನ್ ನೀಡುತ್ತದೆ ಎಂಬುದು ಫೇಕ್: 108 ಸೇವೆ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಮಾತ್ರ-ಆರೋಗ್ಯಾಧಿಕಾರಿ ಸ್ಪಷ್ಟನೆ
- ಮೃಗಾಲಯದಲ್ಲಿರುವ 652 ಪ್ರಾಣಿಗಳ ಸುರಕ್ಷತೆ ಮತ್ತು ಕಾಳಜಿ ಸರಕಾರದ ಆದ್ಯತೆಯಾಗಿದೆ-ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ವರ್ಗಾವಣೆ- ಹೈಕೋರ್ಟ್ಗೆ ರಾಜ್ಯ ಸರಕಾರದ ಮಾಹಿತಿ
- 2026-27 ರ ಕಂಬಳದ ಅಧಿಕೃತ ವೇಳಾಪಟ್ಟಿ ಪ್ರಕಟ- ಪುತ್ತೂರು,ಉಪ್ಪಿನಂಗಡಿ ಕಂಬಳ ಯಾವಾಗ? ಇಲ್ಲಿದೆ ಡಿಟೇಲ್ಸ್..!
- Player Reviews of Popular Siti Casino Non AAMS: Guida alla Scelta del Miglior Sito









