Friday, March 29, 2024
spot_imgspot_img
spot_imgspot_img

ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು!

- Advertisement -G L Acharya panikkar
- Advertisement -

ರಾಯಚೂರು: ₹5 ಕುರುಕುರೆ ಪ್ಯಾಕೇಟ್‌ನಲ್ಲಿ ಗರಿಗರಿ ರೂ.500 ನೋಟು ಕಂಡು ಗ್ರಾಮಸ್ಥರು ಅಚ್ಚರಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೂನೂರಿನಲ್ಲಿ ನಡೆದಿದೆ.

ಹೂನೂರು ಗ್ರಾಮದಲ್ಲಿರುವ 4 ಕಿರಾಣಿ ಅಂಗಡಿಯ ಪೈಕಿ ಒಂದರಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಸ್ಥಳೀಯ ಬಾಲಕ 5ರೂ. ನೀಡಿ ಮ್ಯಾಕ್ಸವಿಟ್‌ ಕಂಪನಿಯ ಕುರುಕುರೆ (ಚಾಟ್‌ ಮಸಾಲ)ಯನ್ನು ಖರೀದಿಸಿ ಮನೆಗೆ ಹೋಗಿ ನೋಡಿದಾಗ ಅದರಲ್ಲಿ ರೂ.500 ಮುಖ ಬೆಲೆಯ ಎರಡು ನೋಟ್‌ ಪತ್ತೆಯಾಗಿದ್ದು, ಇದನ್ನು ಕಂಡ ಕುಟುಂಬಸ್ಥರು ಕಿರಾಣಿ ಅಂಗಡಿಗೆ ಹೋಗಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಕುರೆ ಪ್ಯಾಕೇಟ್‌ಗಳನ್ನು ಖರೀದಿಸಿದ್ದಾರೆ.

ಈ ವಿಷಯ ನೆರೆಯ ನಿವಾಸಿಗಳು ಸಹ ಕುರುಕುರೆ ಖರೀದಿಸಲು ಮುಗಿ ಬಿದ್ದಿದ್ದರೆ. ಒಂದು ಪ್ಯಾಕೇಟ್‌ನಲ್ಲಿ 1 ರಿಂದ 5ವರೆಗೆ ರೂ.500 ನೋಟು ಸಿಕ್ಕಿವೆ. ಒಬ್ಬರಿಗೆ ಸಾವಿರ-ಎರಡು ಸಾವಿರ ರೂ.ಸಿಕ್ಕರೇ ಮತ್ತೊಬ್ಬರಿಗೆ ಬರೋಬ್ಬರಿ ರೂ.12,500 ಹೀಗೆ ಒಟ್ಟಾರೆ 30 ರಿಂದ 35 ಸಾವಿರ ರೂಗಳಷ್ಟು 500 ರೂ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಆರಂಭದಲ್ಲಿ ಕುರುಕುರೆ ಕಂಪನಿಯವರು ಮಕ್ಕಳು ಆಡುವಂತಹ ನಕಲಿ ನೋಟುಗಳನ್ನಿಟ್ಟಿದ್ದಾರೆ ಎಂದು ಭಾವಿಸಿದ್ದ ಜನರು ನಂತರ ಪರಿಶೀಲನೆ ನಡೆಸಿದಾಗ ನಿಜವಾದ ನೋಟುಗಳೇ ಪ್ಯಾಕೇಟ್‌ನಲ್ಲಿ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಪ್ಯಾಕೇಟ್‌ನಲ್ಲಿ ನೋಟು ಕಂಡವರು ಆರಂಭದಲ್ಲಿ ಯಾರಿಗೂ ತಿಳಿಯದೆಯೇ ಹೆಚ್ಚಿನ ಸಂಖ್ಯೆಯಲ್ಲಿ ಕುರುಕುರೆಗಳನ್ನು ಖರೀದಿಸಿದ್ದಾರೆ. ನಂತರ ನಿಧಾನವಾಗಿ ಸುದ್ದಿ ಹರಡುತ್ತಿದ್ದಂತೆ ಇಡೀ ಗ್ರಾಮಸ್ಥರು ಮರುಳಾಗಿ ಉಳಿದ ಎಲ್ಲ ಕಿರಾಣಿ ಅಂಗಡಿಗಳಿಗೆ ತೆರಳಿ ಮ್ಯಾಕ್ಸವಿಟ್‌ ಕಂಪನಿಯ ಜೊತೆಗೆ ವಿವಿಧ ಕಂಪನಿಗಳ ಕುರುಕುರೆ, ಚಾಟ್‌ ಮಸಾಲೆ ಪದಾರ್ಥಗಳ ಪೊಟ್ಟಣ ಖರೀದಿಸಿ ಹರಿದು ನೋಡಿದ್ದಾರೆ. ಅಲ್ಲದೇ ಅಕ್ಕ-ಪಕ್ಕದ ಹಳ್ಳಿಗಳಿಗೂ ಹೋಗಿ ಕುರುಕುರೆ ಪ್ಯಾಕೇಟ್‌ಗಳನ್ನು ಖರೀದಿಸಿ ಪರಿಶೀಲನೆ ಮಾಡಿದ್ದರಿಂದ ಹೂನೂರು ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಕುರುಕುರೆ ಪ್ಯಾಕೇಟ್‌ಗಳೆ ಖಾಲಿಯಾಗಿವೆ.

- Advertisement -

Related news

error: Content is protected !!