Monday, May 20, 2024
spot_imgspot_img
spot_imgspot_img

ಮಲ್ಪೆ: ಷೇರು ಮಾರುಕಟ್ಟೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ..!

- Advertisement -G L Acharya panikkar
- Advertisement -

ಮಲ್ಪೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕತಾರ್‌ನಲ್ಲಿರುವ ಡೊನೆಟ್ ರೋಶನ್ ಲಸ್ರಾದೋ ಎಂಬವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಮಲ್ಪೆ ಯಲ್ಲಿರುವ ತಮ್ಮ ಸಹೋದರಿ ಶಾಲಿನಿ ವೈಲೆಟ್ ಫೆರ್ನಾಂಡಿಸ್ ಎಂಬವರ ಖಾತೆಗೆ ಐದು ಲಕ್ಷ ರೂ. ಹಣ ಹಾಕಿದ್ದು, ಆ ಹಣವನ್ನು ಅಭೀಷೆಕ್ ರಂಜನ್ ಎಂಬವರ ಖಾತೆಗೆ ಹಾಕಲು ತಿಳಿಸಿದ್ದರು.

ಅದರಂತೆ ಮೇ 3ರಂದು ತೊಟ್ಟಂ ಬ್ಯಾಂಕಿನಿಂದ ಹಣವನ್ನು ಅಭಿಷೇಕ್ ಖಾತೆಗೆ ಹಾಕಿದ್ದರು. ಅದೇ ರೀತಿ ರೋಶನ್ ಲಾಭಾಂಶ ಪಡೆಯಲು ಷೇರು ಮಾರುಕಟ್ಟೆಯಲ್ಲಿ 11,90,000ರೂ. ಹಣದ ಹೂಡಿಕೆ ಮಾಡಿದ್ದರು. ಆದರೆ ಆರೋಪಿ ಹೂಡಿಕೆ ಮಾಡಿದ ಹಣದ ಲಾಭಾಂಶವನ್ನು ಕೊಡದೇ ರೋಶನ್ ಹಾಗೂ ಶಾಲಿನಿಗೆ ವಂಚನೆ ಮಾಡಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!