Saturday, July 5, 2025
spot_imgspot_img
spot_imgspot_img

ಕುವೈತ್ ರಾಜ ಶೇಖ್​ ಸಬಾ ಅಲ್​ ಅಹಮದ್​ ಇನ್ನಿಲ್ಲ…

- Advertisement -
- Advertisement -

ಹೊಸದಿಲ್ಲಿ: ಕುವೈತ್ ನ ಅಮೀರ್ ಸಬಾಹ್ ಅಲ್ ಅಹಮದ್​ ಅಲ್ ಜಾಬಿರ್ ಅಲ್ ಸಬಾಹ್ (91) ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ.

1929ರಲ್ಲಿ ಜನಿಸಿದ ಸಬಾಹ್ ಅಲ್ ಅಹಮದ್​ ಅವರು ಆಧುನಿಕ ಕುವೈತ್ ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎಂದೇ ಪ್ರಸಿದ್ಧರಾದವರು. 1963ರಿಂದ 2003ರವರೆಗೆ ಸುಮಾರು 40 ವರ್ಷಗಳ ಕಾಲ ಅವರು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಶೇಖ್ ಜಾಬಿರ್ ಅಲ್ ಸಬಾಹ್ ಅವರ ನಿಧನದ ನಂತರ 2006ರ ಜನವರಿಯಲ್ಲಿ ಅವರು ಕುವೈತ್ ನ ಅಮೀರ್ ಆದರು.

ಶೇಖ್ ಸಬಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಕುವೈತ್ ರಾಜ್ಯ ಹಾಗೂ ಅರಬ್ ಜಗತ್ತು ಮಹಾನ್ ನಾಯಕನನ್ನು ಕಳೆದುಕೊಂಡಿದೆ. ಭಾರತದ ಒಳ್ಳೆಯ ಗೆಳೆಯ ಆಗಿದ್ದ ಅವರು ಜಗತ್ತಿನ ಶ್ರೇಷ್ಠ ದಾರ್ಶನಿಕರೂ ಆಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಷಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂಬುದಾಗಿ ಮೋದಿ ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!