ಬಂಟ್ವಾಳ: ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಸಂಜೆ ವೇಳೆ ನಡೆದಿದೆ.
ಮರದ ತುಂಡುಗಳನ್ನು ಹೇರಿಕೊಂಡು ಬಿಸಿರೋಡು ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ಮೆಲ್ಕಾರ್ ಸಮೀಪದ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಬಿದ್ದಿದೆ.
ಮರದ ಲಾರಿ ಬೀಳುವ ಸ್ಥಿತಿ ಯಲ್ಲಿ ವಾಲಿ ನಿಂತಿರುವ ವೇಳೆಯೇ ಇದನ್ನು ಪಕ್ಕಕ್ಕೆ ಸರಿಸಲು ಕ್ರೇನ್ ಸ್ಥಳಕ್ಕೆ ತರಿಸಲಾಗಿತ್ತು.
ಅದರೆ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಅಡ್ಡಲಾಗಿ ಬೀಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಯಿಂದ ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.
ಹೆದ್ದಾರಿಯಲ್ಲಿ ಆಗಿರುವ ಘಟನೆಯಿಂದ ಟ್ರಾಫಿಕ್ ಸಮಸ್ಯೆ ಯನ್ನು ಸರಿಮಾಡಲು ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಳೆಯನ್ನು ಲೆಕ್ಕಿಸದೆ ಹರಸಾಹಸ ಪಡುತ್ತಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಎಸ್.ಐ.ಗಳಾದ ರಾಜೇಶ್ ಕೆ.ವಿ.ಹಾಗೂ ರಾಮನಾಯ್ಕ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.