ಲೇಖನ: ಭಾರತಿ ಗೌಡ ಮಾಡ್ತೇಲ್, ವಿಟ್ಲ
ಟ್ರಿನ್ ಟ್ರಿನ್ ಟ್ರಿನ್…ಎಂದು ಇದ್ದಕ್ಕಿದ್ದಂತೆ ಫೋನ್ ಬಡಿಯಲಾರಂಭಿಸಿದಾಗ ,ಫೋನ್ ಕೈಗೆತ್ತಿಕೊಂಡ ಆ ಮನೆಯ ಒಡತಿ ಹಲೋ ಯಾರು ಎಂದು ಕೇಳಿದಾಗ ಅದಕ್ಕೆ ಮರು ಉತ್ತರವಾಗಿ,ಆ ಕಡೆಯಿಂದ “ಅಮ್ಮಾ ನಾನು ನಿಮ್ಮ ಮಗ ಆಸ್ಪತ್ರೆಯಿಂದ ಫೋನ್ ಮಾಡ್ತೀದ್ದಿನಿ. ನಿಮ್ಮ ಸೊಸೆ ಈವಾಗಷ್ಟೆ ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು.” ಎಂದು ಹೇಳಿದಾಗ,” ಹೇ..ಹೆಣ್ಣಾ? ಅದನ್ನು ಹೇಳೊಕೆ ಫೋನ್ ಮಾಡಿದ್ದೀಯಾ…? ನಾವೆಲ್ಲ ಗಂಡು ಮಗುವಿನ ಆಸೆಯಲ್ಲಿ ಕಾತುರದಿಂದ ಕಾಯುತ್ತಿದ್ದೇವು ಆ ಪೀಡೆ ಹೆಣ್ಣು ಮಗುನಾ..? ಇಡೊ ಫೋನ್” ಎಂದು ಕಾಲ್ ಕಟ್ ಮಾಡಿದಳು.
ಶಿಲಾಯುಗ ಕಾಲದಲ್ಲಿ ಮನುಷ್ಯನ ಜೀವನ ವಿಧಾನದಲ್ಲಿ ಸ್ತ್ರೀ ಪುರುಷರೆಂಬ ಭಾವನೆ ಸಮಾನವಾಗಿತ್ತು.ಅವರಿಗೆ ಸಮಾನವಾದ ಸ್ಥಾನ ಮಾನ, ಗೌರವ ಸಿಗುತ್ತಿತ್ತು.ಅದರೆ ಮನುಷ್ಯ ಕಾಲ ಕಳೆದಂತೆ ಬದುಕಿನ ಶೈಲಿಯನ್ನು ಕಲಿತುಕೊಂಡಾಗ ಅವನು ಸಾಂಸಾರಿಕ ಜೀವನಕ್ಕೆ ಕಾಲಿಡತೊಡಗಿದನು.ಇದರಿಂದ ಗಂಡ ದುಡಿದು ತರುವವನಾದರೆ ಹೆಂಡತಿ ಅವನ ಸೇವೆ ಮಾಡುವ ,ಮಕ್ಕಳನ್ನು ಹೆತ್ತು ಪಾಲಿಸುವ ಸ್ಥಿತಿ ಪ್ರಾರಂಭವಾದಗ ಹೆಣ್ಣಿನ ಅವನತಿ ಪ್ರಾರಂಭವಾಯಿತು.
ಹೆಣ್ಣು ಕಾಲಕ್ಕೆ ತಕ್ಕಂತೆ ಮಗಳು,ಸೊದರಿ, ಹೆಂಡತಿ, ತಾಯಿ, ಅತ್ತೆ, ಅಜ್ಜಿ ಈ ಪದಗಳನ್ನು ಅಲಂಕರಿಸುತ್ತಾಳೆ.ಇಂದು ಮಹಿಳಾ ಮೀಸಲಾತಿಯಿಂದಾಗಿ ಒಳ್ಳೆಯ ವಿದ್ಯಾಭ್ಯಾಸ ಪಡೆದ ಹೆಣ್ಣು ಮನೆ ಬಿಟ್ಟು ಹೊರಗೆ ಬಂದು ಕೈಗಾರಿಕೆ, ಕಛೇರಿ,ಶಾಲಾ ಕಾಲೇಜುಗಳಲ್ಲಿ ದುಡಿಯುವ ಅವಕಾಶ ಪಡೆದಿದ್ದಾಳೆ.ಅದಲ್ಲದೆ ರಾಜಕಾರಣದಲ್ಲೂ ಭಾಗಿಯಾಗಿದ್ದಾಳೆ.
ಆದರೆ ಇಂದು ಕೆಲವು ಮಹಿಳಾ ಮೀಸಲಾತಿಯಿಂದಾಗಿ ಒಳ್ಳೆಯ ವಿದ್ಯಾಭ್ಯಾಸ ಪಡೆದ ಹೆಣ್ಣು ಮನೆ ಬಿಟ್ಟು ಹೊರಗಡೆ ಬಂದು ಕೈಗಾರಿಕೆ ,ಕಛೇರಿ ,ಶಾಲಾ ಕಾಲೇಜುಗಳಲ್ಲಿ ದುಡಿಯುವ ಅವಕಾಶ ಪಡೆದಿದ್ದಾಳೆ.ಅದಲ್ಲದೆ ರಾಜಕಾರಣದಲ್ಲೂ ಭಾಗಿಯಾಗಿದ್ದಾಳೆ.ಜೊತೆಗೆ ಹಲವು ಮಹಿಳಾ ಸಂಘ ಸಂಸ್ಥೆಗಳು ಹುಟ್ಟಿರುವುದು ಕಾಣಬಹುದು.
ನಮ್ಮ ಅಂಗೈಯ ಐದೂ ಬೆರಳುಗಳು ಒಂದೇ ರೀತಿ ಇರುವುದಿಲ್ಲ.ಅದೇ ರೀತಿ ಪ್ರಸಕ್ತ ಈ ಸಮಾಜದಲ್ಲಿ ಒಂದಿಷ್ಟು ಜನ ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಟ್ಟರೆ, ಇನ್ನು ಕೆಲವರು ಹೆಣ್ಣಿನ ಜೀವನದೊಂದಿಗೆ ಯಾವ ರೀತಿ ಚೆಲ್ಲಾಟ ಆಡುತ್ತಾರೆ ಎಂದು ದಿನ ನಿತ್ಯ ಸುದ್ದಿ ಮಾಧ್ಯಮಗಳಲ್ಲಿ ತಿಳಿಯಬಹುದು.
ಮುಂದೆ ಎಲ್ಲಾ ವಿಷಯಕ್ಕೂ ಮನೆ ಮಂದಿಗೆ ಭಾರವಾಗಿರಬಾರದು,ಕೈಗೊಂಬೆಯಾಗಿರಬಾರದು ಎಂಬ ಕಾರಣಕ್ಕಾಗಿ ಇಂದಿನ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕು ಎನ್ನುವ ಕಾರಣದಿಂದ ಉದ್ಯೊಗದ ಹುಡುಕಾಟದಲ್ಲಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಭಾರಿ ಅವಮಾನಕ್ಕಿಡಾಗುತ್ತಾರೆ. ಒಂದು ವೇಳೆ ಉದ್ಯೊಗ ದೊರೆತರೂ ಅಲ್ಲಿನ ವಾತಾವರಣ ಸಮಂಜಸವಾಗಿರುವುದಿಲ್ಲ. ಅಸಹ್ಯ ಮಾತುಗಳು,ದ್ಯೆಹಿಕ ಹಾಗು ಮಾನಸಿಕ ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ.
ಒಂದು ಹೆಣ್ಣು ಸೊಸೆಯಾಗಿ ಇನ್ನೂಂದು ಮನೆಗೆ ಕಾಲಿಟ್ಟ ಕ್ಷಣದಿಂದ ಆ ಮನೆಯಲ್ಲಿ ಅತ್ತೆ, ನಾದಿನಿ, ಮೈದುನ ಜೊತೆಗೆ ಕೈ ಹಿಡಿದ ಗಂಡನಿಂದಲೂ ವರದಕ್ಷಿಣೆ ,ಆಸ್ತಿ, ಬಂಗಾರ ವಿಚಾರದಲ್ಲಿ ದಿನ ನಿತ್ಯ ಜಗಳವಾಡುತ್ತಾ ಮಾನಸಿಕ,ದ್ಯೆಹಿಕ ಹಿಂಸೆಯನ್ನು ಕೊಡುತ್ತಾರೆ.ಇಲ್ಲಿ ಇಲ್ಲಿ ಅತ್ತೆ ನಾದನಿ ತಾವು ಹೆಣ್ಣೆಂದು ಮರೆತು ತಮ್ಮ ಕೆಟ್ಟ ಬುದ್ದಿಯನ್ನು ಈ ಅಮಾಯಕಳ ಮೇಲೆ ಪ್ರಯೋಗಿಸುತ್ತಾರೆ.
ಹೀಗೆನೆ ಹೆಣ್ಣು ತನ್ನ ಜೀವನದ ಒಂದೊಂದು ಮಟ್ಟಕ್ಕೆ ಕಾಲಿಡುವ ಸಂದರ್ಭದಲ್ಲಿ ಅದೆಷ್ಟೋ ಅವಮಾನ ಅಪವಾದಕ್ಕೆ ತುತ್ತಾಗುತ್ತಾಳೆ. ಆದರೆ ಇವೆಲ್ಲಾ ತನ್ನ ಹಣೆಬರಹ ಎಂದು ಯಾರಲ್ಲೂ ತನ್ನ ನೋವನ್ನು ಹೇಳಿಕೊಳ್ಳದೆ ಸುಮ್ಮನಿರುತ್ತಾಳೆ.ತನ್ನ ಗಂಡನ ಮನೆಯಲ್ಲಿ ತಾನು ಅನುಭವಿಸುವ ನೋವನ್ನು ಮುಖ್ಯವಾಗಿ ತನ್ನ ತವರಿಗೂ ತಿಳಿಸಲು ಇಚ್ಛಿಸುವುದಿಲ್ಲ. ತನ್ನ ಗಂಡನ ಮನೆಯಲ್ಲಿ ತಾನು ಗಂಡನ ಮನೆಯಲ್ಲಿ ಸುಖವಾಗಿರುವುದಿಲ್ಲ ಎನ್ನುವ ವಿಚಾರ ತನ್ನ ತಾಯಿಗೆ ಗೊತ್ತದರೆ ಆಕೆ ದುಃಖಿಸುತ್ತಾಳೆ,ಆಕೆ ಯಾವತ್ತೂ ನೆಮ್ಮದಿಯಾಗಿರಬೇಕು, ಎಂಬ ಕಾರಣಕ್ಕಾಗಿ “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”ಎಂಬ ಮಾತಿನಂತೆ ಎಷ್ಟೇ ಕಷ್ಟ-ಸುಖ ಬಂದರೂ ಗಂಡನ ಮನೆಯಲ್ಲಿ ಇರಲು ನಿರ್ಧರಿಸುತ್ತಾಳೆ.
ಈ ಸಮಾಜದಲ್ಲಿ ಯಾವತ್ತೂ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಿಸಿ ಸೊಸೆಯನ್ನು ಮನೆಗೆ ಬರಮಾಡಿಕೊಳ್ಳುತ್ತಾರೋ ಅಲ್ಲಿಂದ ಆ ಮನೆಯ ತಾಯಿಯ ಜೀವನದ ಸಂತೋಷಗಳು ಸರ್ವನಾಶವಾಗಿ ಮುಂದೆ ಜೀವಂತವಿದ್ದರೂ ಸತ್ತು ಹೋದಂತೆ ತಮ್ಮ ಜೀವನವನ್ನು ಸಾಗಿಸಬೇಕಾಗುತ್ತದೆ. ಯಾವಾಗ ಗಂಡ ತನ್ನ ಹೆಂಡತಿಯ ಗುಲಾಮನಾಗುತ್ತಾನೋ ಅಂತಹ ಸಂದರ್ಭದಲ್ಲಿ ಇಂತಹ ಘಟನೆಗಳು ಎಲ್ಲಾ ಮನೆಗಳಲ್ಲೂ ಎದ್ದು ಕಾಣುತ್ತದೆ. “ಮುತ್ತು ಕೊಟ್ಟೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ” ಎಂಬ ಮಾತು ನಾವಿಲ್ಲಿ ಸ್ಮರಿಸಬಹುದು.
ತಮ್ಮ ಮಕ್ಕಳೇ ತಮಗೆ ಮಾಣಿಕ್ಯ ಎಂದು ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟು ಸಾಕಿ-ಸಲಹಿದ ತಾಯಿಗೆ ಯೌವನ ಮುಪ್ಪಾಗಿ ಆರೋಗ್ಯ ಕೆಟ್ಟು ಹೋದಾಗ ಮುಂದೆ ನಿಮ್ಮ ಹೆತ್ತ ತಾಯಿಯ ಜೊತೆ ನಿಮಗೆ ಹೋಗಲು ಹಿಂಜರಿಕೆ,ಮುಜುಗರಾ ಆಗುತ್ತೆ ಅಲ್ವಾ? ಆದರೆ ಹೆತ್ತ ತಾಯಿ ತಮ್ಮ ಮಕ್ಕಳು ಏನೇ ಮಾಡಿದರೂ ಎಲ್ಲಾ ನೋವನ್ನು ಮನಸಲ್ಲೇ ಇಟ್ಟು ಕೊರಗಿಕೊಂಡು ತಮ್ಮ ಮಕ್ಕಳು ನೂರಾರು ವರುಷ ಚೆನ್ನಾಗಿ ಬಾಳಲಿ ಎಂದು ಶುಭ್ರ ಮನಸಿನಿಂದ ಹಾರೈಸುತ್ತಾಳೆ.
ಈ ಕಾಲದಲ್ಲಿ ಮುಗ್ಧ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಯತೊಡಗಿದೆ.ಪುರುಷ ಪ್ರಧಾನ ಸಮಜದಲ್ಲಿ ಅದೆಷ್ಟೊ ತಪ್ಪು ನಡೆದರೂ ಕ್ಷಮೆ ಇರುವಾಗ ಹೆಣ್ಣಿಂದ ಸಣ್ಣ ಪುಟ್ಟ ತಪ್ಪು ನಡೆದಾಗ ಆಕೆಯ ಮೇಲೆ ಅಪವಾದ ಹಾಕಿ ಆಕೆಯನ್ನು ಮನೆಯಿಂದ ಹೊರಗಟ್ಟುವುದು,ಜೀವ ಬೆದರಿಕೆ ಒಡ್ಡುವುದು ಮೊದಲಾದ ಅನಾಚಾರಗಳನ್ನು ಆಕೆಯ ಮೇಲೆ ಪ್ರಯೋಗಿಸುತ್ತಾರೆ. ಇಂತಹ ಹಿಂಸೆಯನ್ನು ಸಹಿಸಲಾರದೆ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ.ಇದರಿಂದ ಪುರುಷ ಜನ್ಮಕ್ಕೆ ಅದೇನು ನೆಮ್ಮದಿ ಸಿಗುತ್ತೋ ಗೊತ್ತಿಲ್ಲ.ಈ ಜಗತ್ತಿನಲ್ಲಿ ನಮ್ಮನ್ನು ಪ್ರೀತಿಸುವವರು ಅನೇಕ ಮಂದಿ ಸಿಗಬಹುದು, ಆದರೆ ನೀವು ಯಾರನ್ನು ಬೇಕಾದರೂ ಪ್ರೀತಿಸಿ , ಜೊತೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನಮಗೆ ಜನ್ಮ ನೀಡಿದ ನಮ್ಮ ತಾಯಿ ಪುನರ್ಜನ್ಮ ಪಡೆದಿರುತ್ತಾಳೆ.ಕೊನೆಯದಾಗಿ ಈ ಸಮಾಜಕ್ಕೆ ಒಂದು ಮಾತು., ತಮ್ಮಲ್ಲಿ ಎಷ್ಟೇ ಆಸ್ತಿ-ಪಾಸ್ತಿ ಇದ್ದು ಐಷಾರಾಮಿಯಾಗಿ ಬದುಕು ಸಾಗಿಸುತ್ತಿದ್ದರೂ, ತಾವು ತಮ್ಮ ಮಾತಾಪಿತರ ಕಣ್ಣಿಂದ ಒಂದೆರಡು ಹನಿ ಕಣ್ಣಿರು ಹಾಕಿಸಿದರೆ ಸಾಕು ನಿಮ್ಮ ಜೀವನ ಸರ್ವನಾಶವಾಗಲು.ನೆನಪಿಡಿ!
ಲೇಖನ: ಭಾರತಿ ಗೌಡ ಮಾಡ್ತೇಲ್, ವಿಟ್ಲ