Thursday, April 25, 2024
spot_imgspot_img
spot_imgspot_img

ವಾಕಿಂಗ್‌ ಬಿಟ್ಟಿದ್ದ ನಾಯಿಯನ್ನು ಕದ್ದು ಪರಾರಿಯಾದ ಕಳ್ಳರು..!

- Advertisement -G L Acharya panikkar
- Advertisement -

ಬೆಂಗಳೂರು: ಬೈಕ್‌ನಲ್ಲಿ ಬಂದ ಮೂವರು ಯುವಕರು ವಾಕಿಂಗ್‌ಗೆ ಬಿಟ್ಟಿದ್ದ ಶ್ವಾನವೊಂದನ್ನು ಕಳವುಗೈದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೈಯದ್ ಎಂಬುವವರಿಗೆ ಸೇರಿದ ಜೋಯಿ ಎನ್ನುವ ನಾಯಿಯನ್ನು ಕಳವು ಮಾಡಿದ್ದಾರೆ. ಬೆಂಗಳೂರಿನ ಫ್ರೆಜರ್‌ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಸೈಬಿರಿಯನ್‌ ಹಸ್ಕಿ ತಳಿಯ ಜೋಯಿಯನ್ನು ಸಂಜೆ ವೇಳೆ ಹೊರಗಡೆ ವಾಕಿಂಗ್‌ಗೆ ಬಿಡಲಾಗಿತ್ತು. ಆದರೆ ಬೈಕ್‌ನಲ್ಲಿ ಬಂದಿದ್ದ ಮೂವರು ಯುವಕರು, ತಮ್ಮದೇ ನಾಯಿ ಎನ್ನುವಂತೆ ಮುದ್ದು ಮಾಡಿಕೊಂಡು ಸಾರ್ವಜನಿಕರ ಎದುರೇ ಬೈಕ್‌ನಲ್ಲಿ ಕರೆದುಕೊಂಡು ಪರಾರಿಯಾಗಿದ್ದಾರೆ.

ತುಂಬಾ ಸಮಯವಾದರೂ ನಾಯಿ ಮನೆಗೆ ಬಾರದಿದ್ದನ್ನು ಗಮನಿಸಿದ ಸೈಯದ್‌ ಸಿಸಿಟಿವಿ ವೀಕ್ಷಿಸಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಮೂವರು ಯುವಕರು ನಾಯಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಮಾಲೀಕ ಸೈಯದ್‌ ಟ್ವೀಟ್‌ ಮಾಡಿ ಸಿಸಿಟಿವಿ ದೃಶ್ಯಾವಳಿಯ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿ ಶ್ವಾನ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!