Friday, May 3, 2024
spot_imgspot_img
spot_imgspot_img

ಕಳೆದ ಸರಕಾರ ಮತ್ತು ಶಾಸಕರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿರುವುದು ಶಾಸಕರ ಘನತೆಗೆ ಶೋಭೆ ತರುವುದಿಲ್ಲ: ಗೋವಿಂದರಾಜ್‌ ಭಟ್‌

- Advertisement -G L Acharya panikkar
- Advertisement -

ವಿಟ್ಲ: ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಶಾಸಕರು ವಿಟ್ಲಮುಡ್ನೂರು ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸಲಿಲ್ಲ ಎಂಬುದಾಗಿ ಶಾಸಕ ಅಶೋಕ್‌ ಕುಮಾರ್‌ ರೈಯವರು ಈ ಹಿಂದೆ ಭಾಷಣವೊಂದರಲ್ಲಿ ಹೇಳಿಕೊಂಡಿದ್ದು ಶಾಸಕರ ಈ ಹೇಳಿಕೆಯ ವಿರುದ್ದವಾಗಿ ವಿಟ್ಲ ಮುಡ್ನೂರು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌ ಗೋವಿಂದರಾಜ್‌ ಭಟ್‌ರವರು ಪತ್ರಿಕಾ ವರದಿ ಮಂಡಿಸಿದ್ದಾರೆ.

’ಕಳೆದ ಮಾಜಿ ಶಾಸಕರ ಅವಧಿಯಲ್ಲಿ ಕೊರೋನದಂತಹ ಸಂಕಷ್ಟದಲ್ಲಿ ಸುಮಾರು 12 ಕೋಟಿ ಅನುದಾನವನ್ನು ದೊರಕಿಸಿ ಕೊಟ್ಟಿರುವುದನ್ನು ವಿಟ್ಲ ಮುಡ್ನೂರು ಗ್ರಾಮದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಿದೆ. ಅದರಲ್ಲೂ ಸುಮಾರು 50 ವರ್ಷಕ್ಕಿಂತ ಹಳೆಯದಾದ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ನೀರು ತೋಡಿಗೆ ಅಡ್ಡಲಾಗಿ ಹಾಕಿರುವ ಹಾಸು ಕಲ್ಲಿನ ಮುಳುಗು ಸೇತುವೆಯ ಮೂಲಕ ಆ ಭಾಗದ ಜನ ಸಂಚರಿಸುತ್ತಿದ್ದರು.


ಈ ತೋಡಿಗೆ ತಲಾ 1 ಕೋಟಿ ಅನುದಾನ ಒದಗಿಸಿ ಜನರ ಕಷ್ಟಗಳಿಗೆ ಸ್ಪಂದಿಸಿರುವುದು ಮಾತ್ರವಲ್ಲದೇ ಬದನಾಜೆ ಪರಿಯಲ್ತಡ್ಕ ರಸ್ತೆಯನ್ನು ಲೋಕೋಪಯೋಗಿ ಇಲಾಖಾ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿರುವುದು ಮತ್ತು ಮೂರು ಕೋಟಿ ಅನುದಾನವನ್ನು ಈ ಹಿಂದಿನ ಸರಕಾರದಿಂದ ಬಿಡುಗಡೆಗೊಳಿಸಿ ಅಭಿವೃದ್ಧಿ ನಡೆಯುತ್ತಿರುವುದು ಕೂಡ ಜನರ ಮನಸಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಈಗಿನ ಶಾಸಕರು ಕಳೆದ ಸರಕಾರ ಮತ್ತು ಶಾಸಕರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿರುವುದು ಹಾಲಿ ಶಾಸಕರ ಘನತೆಗೆ ಶೋಭೆ ತರುವುದಿಲ್ಲ. ಈ ರೀತಿಯ ಸುಳ್ಳುಗಳ ಮೂಲಕ ವಿಟ್ಲ ಮುಡ್ನೂರು ಜನತೆಯ ದಾರಿ ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸುವುದು ಒಳ್ಳೆಯದು’ ಎಂದು ಗೋವಿಂದರಾಜ್ ಭಟ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರಕಾರ ಬಂದು 6 ತಿಂಗಳು ಕಳೆದರೂ ವಿಟ್ಲಮುಡ್ನೂರು ಗ್ರಾಮದಲ್ಲಿ ಅಭಿವೃದ್ದಿಗೆ ನಯಾಪೈಸೆಯೂ ಅನುದಾನ ಬರದೇ ಇರುವುದು ಆ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!