Thursday, May 9, 2024
spot_imgspot_img
spot_imgspot_img

ಹಲವು ಸುಸಜ್ಜಿತ ವ್ಯವಸ್ಥೆಗಳ ಸಿದ್ಧತೆಗಳೊಂದಿಗೆ ಅದ್ದೂರಿಯಾಗಿ ತಯಾರಾಗಿ ನಿಂತಿದೆ ‘ಬೆಂಗಳೂರು ಕಂಬಳ’: ಏನೇನಿದೆ ವಿಶೇಷತೆಗಳು..?

- Advertisement -G L Acharya panikkar
- Advertisement -

ಬೆಂಗಳೂರು ಕಂಬಳ ಸುಮಾರು ಎಂಟರಿಂದ ಹತ್ತು ಲಕ್ಷ ಜನರು ಭಾಗವಹಿಸುವಂತಹ ದೊಡ್ಡ ಕಾರ್ಯಕ್ರಮ. ಸುಮಾರು 70 ಎಕರೆ ಜಾಗದಲ್ಲಿ ಕಂಬಳ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ವಿಶಾಲವಾದ ಕಾರ್ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಕಂಬಳ ವೀಕ್ಷಣೆಗೆ ವಿ ಐ ಪಿ ಗ್ಯಾಲರಿ ಹಾಗೂ ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ ವಿಶೇಷ ಗ್ಯಾಲರಿಯನ್ನು ಮಾಡಲಾಗಿದೆ.

ಬೃಹತ್ ಗಾತ್ರದ ಸ್ಟೇಜ್ ನಿರ್ಮಿಸಲಾಗಿದ್ದು,ಕರಾವಳಿ ಮಾದರಿಯಲ್ಲೇ ಕಂಬಳದ ಕರೆ ನಿರ್ಮಾಣ ಮಾಡಲಾಗಿದೆ.

ಕೋಣಗಳಿಗೆ ವಿಶೇಷ ತಂಗುದಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಯಸ್ಸಾದವರಿಗೆ ಸುಸಜ್ಜಿತ ವ್ಯವಸ್ಥೆಯನ್ನು ಮಾಡಲಾಗಿದೆ. ಮಣಿಪಾಲ ಹಾಸ್ಪಿಟಲ್ ನೇತೃತ್ವದಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರವು ಇದ್ದು, ಹಾಸ್ಪಿಟಲ್ ನಂತೆ ಐ ಸಿ ಯು ಕೇಂದ್ರ
ಕಲ್ಪಿಸಲಾಗಿದೆ. ಕೋಣಗಳಿಗೆ ಪಶು ವೈದ್ಯಕೀಯ ಕೇಂದ್ರವು ಇದೆ, ವಿಶೇಷವಾಗಿ ನಾಟಿ ವೈದ್ಯರುಗಳನ್ನು ನೇಮಿಸಲಾಗಿದೆ.

ತುರ್ತು ಚಿಕಿತ್ಸೆಗಾಗಿ ಅಗ್ನಿಶಾಮಕ ದಳ ಹಾಗೂ ಆಂಬುಲೆನ್ಸ್ ಸೇವೆಯನ್ನು ಕಲ್ಪಿಸಲಾಗಿದ್ದು,ಎಮರ್ಜೆನ್ಸಿ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ವಿಶೇಷವಾಗಿ ವಿವಿಧ ಬಗೆಯ ಫುಡ್ ಕೋರ್ಟ್ ಗಳು ತೆರೆದುಕೊಂಡಿರುತ್ತದೆ. ಶನಿವಾರ ಸಂಜೆ ೭ ಗಂಟೆಗೆ ಕನ್ನಡ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಾರಥ್ಯದಲ್ಲಿ “ಗುರುಕಿರಣ್ ನೈಟ್” ನಡೆಯಲಿರುವ ವಿಭಿನ್ನ ರೀತಿಯ ವೇದಿಕೆ ಸಜ್ಜಾಗಿದೆ.

ಹಲವು ಗಣ್ಯರು, ಸಿನಿಮಾ ನಟ ನಟಿಯರ ಭಾಗವಹಿಸುವಿಕೆ ಈ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ.

- Advertisement -

Related news

error: Content is protected !!