Sunday, July 26, 2026
spot_imgspot_img
spot_imgspot_img

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌‌ಎಲ್‌ಸಿ ಯಲ್ಲಿ ಶೇಕಡಾ 100 ಫಲಿತಾಂಶ

- Advertisement -
- Advertisement -

ಮಾಣಿ: ಶಾಲಾ ಶಿಕ್ಷಣ ಇಲಾಖೆಯು ನಡೆಸಿದ 2023-24 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ಮಾಣಿ, ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ100 ಫಲಿತಾಂಶವನ್ನು ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವೃದ್ಧಿ ಎ ಕೊಂಡೆ ಅತೀ ಹೆಚ್ಚು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಶ್ರೀ ಅಶೋಕ್ ಬಿ ಕೊಂಡೆ ಮತ್ತು ಶ್ರೀಮತಿ ಮಧುರ ದಂಪತಿಗಳ ಪುತ್ರಿ.

ದ್ವಿತೀಯ ಸ್ಥಾನಿಯಾದ ಮಾನ್ಯ ಆರ್ ಶೆಟ್ಟಿ ಶ್ರೀ ರವೀಂದ್ರ ದರ್ಬೆ ಮತ್ತು‌‌ ಶ್ರೀಮತಿ ಹರಿಣಿ ದಂಪತಿಗಳ ಪುತ್ರಿ. ತೃತೀಯ ಸ್ಥಾನವನ್ನು ಪಡೆದುಕೊಂಡಿರುವ ಪ್ರೇಕ್ಷಾ ಶ್ರೀ‌ ಕೆ. ಆನಂದ ಕುಲಾಲ್ ಮತ್ತು‌ ಶ್ರೀಮತಿ‌ ಸುಶೀಲ ಎ ದಂಪತಿಗಳ‌ ಪುತ್ರಿ. ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ , ಶಾಲೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!