Thursday, May 16, 2024
spot_imgspot_img
spot_imgspot_img

ಉಡುಪಿ: ಕೋಳಿ ಗೂಡಿಗೆ ನುಗ್ಗಿ ಕೋಳಿ ತಿಂದ ಚಿರತೆ -ಜನರಲ್ಲಿ ಹೆಚ್ಚಿದ ಆತಂಕ

- Advertisement -G L Acharya panikkar
- Advertisement -

ಉಡುಪಿ: ಚಿರತೆಯೊಂದು ಕೋಳಿ ಗೂಡಿಗೆ ನುಗ್ಗಿ, ಕೋಳಿ ತಿಂದಿರುವ ಘಟನೆ ಉಡುಪಿ ಮಣಿಪಾಲದ ಸರಳೆಬೆಟ್ಟುವಿನಲ್ಲಿ ನಡೆದಿದೆ.

ಸರಳಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜಾ ಎಂಬವರ ಮನೆಯಲ್ಲಿದ್ದ ಕೋಳಿಗೂಡಿಗೆ ರಾತ್ರಿ ಹೊತ್ತಿನಲ್ಲಿ ದಾಳಿ ನಡೆಸಿದ ಚಿರತೆ, ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ತಿಂದಿದೆ. ಒಂದು ಕೋಳಿಯನ್ನು ಗೂಡಿನಲ್ಲಿಯೇ ಬಿಟ್ಟು ಓಡಿ ಹೋಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ.

ಸದ್ಯ ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸೆರಳೆಬೆಟ್ಟು ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಕಳ, ಸಣ್ಣಕ್ಕಿ ಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರ ಸೇರಿದಂತೆ ಮೊದಲಾದ ಕಡೆ ಚಿರತೆ ಸಂಚಾರ ಕಂಡು ಬಂದಿದ್ದು, ಅದರ ಹಾವಳಿ ಹೆಚ್ಚಾಗಿದೆ. ಸ್ಥಳೀಯರು ಈ ಪರಿಸರದಲ್ಲಿ ಎರಡು-ಮೂರು ಚಿರತೆ ಇದೆ ಎಂದು ಹೇಳುತ್ತಿದ್ದಾರೆ. ಈ ಭಾಗದಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

- Advertisement -

Related news

error: Content is protected !!