Friday, May 3, 2024
spot_imgspot_img
spot_imgspot_img

ಚಳಿಗಾಲದಲ್ಲಿ ಗೆಣಸಿನ ಬಳಕೆಯಿರಲಿ; ದೇಹಕ್ಕೆ ಪರಿಪೂರ್ಣ ಆಹಾರವಾಗಲಿದೆ

- Advertisement -G L Acharya panikkar
- Advertisement -

ಅನಾದಿ ಕಾಲದಿಂದಲೂ ಗೆಣಸು ಪೌಷ್ಟಿಕ ಆಹಾರ ಎನಿಸಿಕೊಂಡು ಬಂದಿದೆ. ಆದಿ ಮಾನವರೂ ಕೂಡ ಕಾಡುಗಳಲ್ಲಿ ಸಿಗುತ್ತಿದ್ದ ಗಡ್ಡೆಯ ಗೆಣಸನ್ನು ತಿಂದು ಬದುಕು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೆಣಸು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು ಎಂದು ಗೆಣಸಿನಿಂದ ದೂರ ಓಡುವವರೇ ಹೆಚ್ಚು, ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಸಿದರೆ ಪರಿಪೂರ್ಣ ಆಹಾರವಾಗಿಲಿದೆ.

ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರದ ಸೇವನೆ ಅಗತ್ಯ. ಹೀಗಾಗಿ ಅದಕ್ಕೆ ಸಿಹಿ ಆಲೂಗಡ್ಡೆ ಅಥವಾ ಗೆಣಸು ಉತ್ತಮ ಆಹಾರವಾಗಿದೆ. ಇದರಲ್ಲಿ ಯಥೇಚ್ಛವಾದ ಕಾರ್ಬೋಹೈಡ್ರೆಟ್, ಕೊಲೆಸ್ಟ್ರಾಲ್ ಸೋಡಿಯಮ್ ನಂತಹ ಅಂಶಗಳು ಇರುತ್ತವೆ. ಇವು ದೇಹವನ್ನು ಬೆಚ್ಚಗಿರಿಸಿ, ಚಳಿಗಾಲದಲ್ಲಿ ಕಾಡುವ ಸುಸ್ತು ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಚಳಿಗಾಲದಲ್ಲಿ ಗೆಣಸಿನ ಬಳಕೆ ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದ ಸ್ವಾಸ್ಥವನ್ನು ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಬಿಟ್ರೋಟ್, ಕ್ಯಾರೆಟ್ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಸಿಹಿ ಪೊಟಾಟೋ ಅಥವಾ ಗೆಣಸು ಕೂಡ ಹೌದು.

750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು. ಅಲ್ಲದೆ ಇದನ್ನು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿಯೂ ಸೇವಿಸಬಹುದು. ಆದ್ದರಿಂದ ಸಿಹಿ ಪೊಟಾಟೊ ಒಂದು ಪರಿಪೂರ್ಣ ಆಹಾರವಾಗಿದೆ.

ಮಧುಮೇಹಿಗಳಿಗೆ ಗೆಣಸು ಉತ್ತಮ ಆಹಾರವಾಗಿದೆ. ಅಲ್ಲದೆ ಬೊಜ್ಜು, ಪಿಸಿಒಡಿ ಸಮಸ್ಯೆ ಇರುವವರಿಗೆ ಉತ್ತಮ ನಾರಿನ ತರಕಾರಿಯಾಗಿದೆ.
ನೀವು ಜಿಮ್‌ಗಳಿಗೆ ಹೋಗುವವರಾದರೆ ಅಥವಾ ಇನ್ನಿತರ ಟ್ರೈನಿಂಗ್‌ಗಳಿಗೆ ತೆರಳುವವರಾದರೆ ಸಂಜೆ ಸಮಯದಲ್ಲಿ ಗೆಣಸು ಉತ್ತಮ ಸ್ನಾಕ್ಸ್ ಆಗಲಿದೆ. ಗೆಣಸಿನ ಪರೋಟ ಅಥವಾ ಅದನ್ನು ಬೇಯಸಿ ಹಾಗೆಯೇ -ತಿನ್ನಬಹುದು.
ಗೆಣಸಿನಲ್ಲಿ ಯಥೇಚ್ಛವಾದ ವಿಟಮಿನ್ ಎ ಅಂಶವಿದೆ. ವಿಟಮಿನ್ ಎ ರೋಗದ ವಿರುದ್ಧ ಹೋರಾಡಲು ಸಹಾಯಕವಾಗಿದೆ.
ಗೆಣಸು ನಿಮ್ಮ ದೇಹದ ಚರ್ಮವನ್ನು ಮೃದುಗೊಳಿಸುಲು ಸಹಾಯ ಮಾಡುತ್ತದೆ. ದೇಹ ಉಬ್ಬುವಿಕೆ, ಆಮೀಯತೆಯಿಂದಲೂ ಇದು ರಕ್ಷಿಸಲಿದೆ.
ಗೆಣಸು ನಿಮಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಹೀಗಾಗಿ ನೀವೇನಾದರೂ ನಿದ್ದೆಗಡುವ ಕೆಲಸವೇನಾದರೂ ಮಾಡಿದ್ದರೆ ಗೆಣಸಿನ ಖಾದ್ಯವನ್ನು ಸೇವಿಸಿ ಮಲಗಿದರೆ ನಿದ್ದೆ ಚೆನ್ನಾಗಿ ಬರುತ್ತದೆ.

- Advertisement -

Related news

error: Content is protected !!