Saturday, June 28, 2025
spot_imgspot_img
spot_imgspot_img

ಲಿಬಿಯಾದಲ್ಲಿ ಭಾರತೀಯರ ಅಪಹರಣ

- Advertisement -
- Advertisement -

ಲಿಬಿಯಾ: ಲಿಬಿಯಾದಲ್ಲಿ ಏಳು ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಕ್ಕೆ ಸೇರಿದ ಏಳು ಮಂದಿ ಕಳೆದ ತಿಂಗಳು ಅಪಹರಣಕ್ಕೀಡಾಗಿದ್ದಾರೆ.

ಸದ್ಯ ಲಿಬಿಯಾ ಅಧಿಕಾರಿಗಳ ಜತೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.ಅಪಹರಣಕ್ಕೊಳಗಾಗಿರುವ ಭಾರತೀಯ ಪ್ರಜೆಗಳು ನಿರ್ಮಾಣ ಮತ್ತು ತೈಲ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.


ಸೆಪ್ಟೆಂಬರ್ 14 ರಂದು ಭಾರತಕ್ಕೆ ಆಗಮಿಸಲು ಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಭಾರತೀಯರನ್ನು ಅಪಹರಿಸಲಾಗಿದೆ ಎಂದು ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಆಫ್ರಿಕಾದ ತೈಲ ಸಂಪದ್ಭರಿತ ದೇಶವಾದ ಲಿಬಿಯಾ ಹಿಂಸಾಚಾರ ಮತ್ತು ಅಶಾಂತಿಗೆ ಸಾಕ್ಷಿಯಾಗಿದೆ.

- Advertisement -

Related news

error: Content is protected !!