Friday, June 5, 2026
spot_imgspot_img
spot_imgspot_img

ಬೆಳ್ತಂಗಡಿ: ಗಡಾಯಿಕಲ್ಲಿಗೆ ಬಡಿದ ಸಿಡಿಲು.! ಕೆಲ ಕಾಲ ಕಾಣಿಸಿಕೊಂಡ ಬೆಂಕಿ

- Advertisement -
- Advertisement -

ಬೆಳ್ತಂಗಡಿ: ಗುಡುಗು ಸಿಡಿಲಿನಿಂದ‌ ಮಳೆಯಾದ ಪರಿಣಾಮ ಗಡಾಯಿಕಲ್ಲಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಇದನ್ನು ಕಂಡ ಸ್ಥಳೀಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಸೋಮವಾರ ಶಿಬಾಜೆ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದ್ದು, ಮಂಗಳವಾರ ಅಳದಂಗಡಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಒಂದು ತಾಸಿಗೂ ಅಧಿಕ ಕಾಲ ಗಾಳಿ ಮಳೆಯಾಗಿದ್ದು. ಮಿಂಚು ಅಪ್ಪಳಿಸಿದ ರಭಸಕ್ಕೆ ಗಡಾಯಿಕಲ್ಲಿನಲ್ಲಿ ಕೆಲ ಕಾಲ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷವೂ ಗುಡುಗು ಮಿಂಚಿನಿಂದ ಗಡಾಯಿಕಲ್ಲಿನ‌ ಒಂದು ಪಾರ್ಶ್ವದ ಕಲ್ಲಿನ ತುಣುಕು ಬಿದ್ದು ಸ್ಫೋಟದಂತ ಸದ್ದು ಉಂಟಾಗಿ ಆತಂಕ ಮೂಡಿಸಿತ್ತು.

- Advertisement -

Related news

error: Content is protected !!