- Advertisement -
- Advertisement -


ಬೈಂದೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ಬೈಂದೂರಿನಲ್ಲಿ ನಡೆದಿದೆ.
ಮೂಲತಃ ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿ ಸಲೀಂ(38) ಮೃತಪಟ್ಟ ದುರ್ದೈವಿ.
ಇವರು ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು,ವಿವಾಹಿತರಾಗಿರುವ ಇವರು ಎರಡು ತಿಂಗಳ ಮಗು ಹೊಂದಿದ್ದಾರೆ. ಬೈಂದೂರು ಪರಿಸರದ ಜನಸ್ನೇಹಿ ಲೈನ್‌ಮ್ಯಾನ್ ಆಗಿರುವ ಇವರು ಅಕಾಲಿಕ ನಿಧನ ಅಘಾತ ಉಂಟು ಮಾಡಿದೆ.
- Advertisement -