- Advertisement -
- Advertisement -


ವಿಟ್ಲ: ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ 43 ನೇ ವಾರ್ಷಿಕ ಭಜನಾ ಮಹೋತ್ಸವವು ಮಾ. 8 ನೇ ಶುಕ್ರವಾರದಿಂದ ಮಾ. 10 ನೇ ಆದಿತ್ಯವಾರದವರೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಈ ಪ್ರಯುಕ್ತ ಇಂದು ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗೊನೆಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರು, ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು & ಸದಸ್ಯರು ಹಾಗೂ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು & ಸದಸ್ಯರು ಸೇರಿದಂತೆ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
- Advertisement -