- Advertisement -
- Advertisement -



ಲಯನ್ಸ್ ಕ್ಲಬ್ ವಿಟ್ಲ ಸಿಟಿಯ 2025-26ನೇ ಸಾಲಿನ ಅಧ್ಯಕ್ಷರಾಗಿ ಶ್ವೇತ ರವಿ ಕುಮಾರ್ ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕರಾದ ಪಿ.ಕೆ.ಗಣೇಶ್ ಪುತ್ತೂರು ಹಾಗೂ ಮಲ್ಲಿಕ ಸುಪುತ್ರಿ ಮತ್ತು ಉಪನ್ಯಾಸಕ ರವಿ ಕುಮಾರ್ ಇವರ ಧರ್ಮಪತ್ನಿ ಆಗಿರುತ್ತಾರೆ. ಕ್ಲಬ್ ನ ಕಾರ್ಯದರ್ಶಿಯಾಗಿ ಉದ್ಯಮಿ ದಿನಕರ ಆಳ್ವ.ಕೆ , ಕೋಶಾಧಿಕಾರಿಯಾಗಿ ಸಾಮಾಜಿಕ ಧಾರ್ಮಿಕ ಮುಂದಾಳು ಬಿ.ಸಂದೇಶ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರ ಪದಗ್ರಹಣ ಸಮಾರಂಭವು ದಿನಾಂಕ 06.07.2025 ನೇ ಆದಿತ್ಯವಾರ ಸಂಜೆ ಗಂಟೆ 7 ಕ್ಕೆ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ಮಾಜಿ ರಾಜ್ಯಪಾಲರಾದ ಲಯನ್ ಅರುಣ್ ಶೆಟ್ಟಿಯವರು ನೆರವೇರಿಸಲಿದ್ದು ಮುಖ್ಯ ಅತಿಥಿಯಾಗಿ ರಾಜ್ಯಪಾಲರ ಕೊ ಆಡಿನೇಟರ್ ಜ್ಯೋತಿ ಶ್ರೀಧರ್ ರಾಜ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -