- Advertisement -
- Advertisement -





ಮಂಗಳೂರು;ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಡಿ ವತಿಯ ಮೆಗಾ ಸೇವಾ ಪ್ರಾಜೆಕ್ಟ್ ಆದ ಅಕ್ಷಯಪಾತ್ರ ಫೌಂಡೇಶನ್‌ಗೆ ಫುಡ್ ಟ್ರಕ್ ಅನ್ನು ಹಸ್ತಾಂತರಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಅರ್ಥಪೂರ್ಣ ಕಾರ್ಯಕ್ರಮವು 2026ರ ಜೂನ್ 10ರ ಬುಧವಾರದಂದು ಸಂಜೆ 5.00 ಗಂಟೆಗೆ ಮಂಗಳೂರಿನ ಬೆಂಜನಪದವಿನಲ್ಲಿರುವ ಅಕ್ಷಯಪಾತ್ರ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಫೌಂಡೇಶನ್ (LCIF) ಸಹಕಾರದೊಂದಿಗೆ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸುವ ಈ ಉದಾತ್ತ ಕಾರ್ಯ ನಡೆಯಲಿದೆ.
ಈ ಕಾರ್ಯಕ್ರಮ ಜಿಲ್ಲಾ ರಾಜ್ಯಪಾಲರಾಗಿರುವ ಕುಡುಪಿ ಅರವಿಂದ ಶೆಣೈ ಯವರ ಅಧ್ಯಕ್ಷತೆಯಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
- Advertisement -








