Friday, April 26, 2024
spot_imgspot_img
spot_imgspot_img

ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಶನಲ್ ೩೧೭ ಡಿ ಜಿಲ್ಲೆ ಸಂಪುಟ ಪದಗ್ರಹಣ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ೧೦೪ ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಶನಲ್ ಇದರ ಲಯನ್ಸ್ ಜಿಲ್ಲೆಯ ದಕ್ಷಿಣಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಈ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ೩೧೭ ಡಿ ಜಿಲ್ಲಾ ಗವರ್ನರ್ ಆಗಿ ಡಾ ಗೀತಪ್ರಕಾಶ್ ಎ. ಅವರು ಅಧಿಕಾರ ಸ್ವೀಕರಿಸಿ ಸೇವಾಯೋಜನೆಗಳ ಅನುಷ್ಠಾನಕ್ಕಾಗಿ ನಿಯೋಜಿಸಿದ ತನ್ನ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭವು ವಿಟ್ಲ ನೀರಕಣಿ ಜೆ.ಎಲ್ ಆಡಿಟೋರಿಯಂನಲ್ಲಿ ಮನ್ವಂತರ ಪರಿವರ್ತನಾ ಕಾಲ ಎಂಬ ಹೆಸರಿನಲ್ಲಿ ನಡೆಯಿತು.
೩೧೭ ಡಿ ಜಿಲ್ಲೆ ಗವರ್ನರ್ ಡಾ. ಗೀತಪ್ರಕಾಶ್, ಜಿಲ್ಲಾ ಪ್ರಥಮ ಮಹಿಳೆ ಡಾ. ಗಾಯತ್ರಿ ಜಿ. ಪ್ರಕಾಶ್ ಅವರಿಗೆ ಮತ್ತು ಅವರ ತಂಡಕ್ಕೆ ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ಆರ್.ಮುರುಗನ್ ಅವರು ಕೇರಳದಿಂದಲೇ ಆನ್‌ಲೈನ್‌ನಲ್ಲಿ ಪ್ರತಿಜ್ಞಾವಿಧಿ ಬೋಧಿಸಿ, ಪದಗ್ರಹಣ ನೆರವೇರಿಸಿದರು. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ ಗಾಯತ್ರಿ ಜಿ.ಪ್ರಕಾಶ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು.

೩೧೭ ಡಿ ಜಿಲ್ಲೆ ಗವರ್ನರ್ ಡಾ.ಗೀತಪ್ರಕಾಶ್ ಅವರು ಮಾತನಾಡಿ, ಸರ್ವಿಸ್ ಬಿಫೋರ್ ಸೆಲ್ ಎಂಬ ಧ್ಯೇಯವಾಕ್ಯದೊಂದಿಗೆ ೨೦೨೦-೨೧ನೇ ಸಾಲಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಹಸಿರ ಮಡಿಲು, ಜಲಾಮೃತ, ಜೀವನ್ಮುಖಿ, ಕರುಣಾ, ಪುನರ್ಜನ್ಮ, ಸ್ವರಕ್ಷಾ, ವಾತ್ಸಲ್ಯ ಎಂಬ ಉದ್ದೇಶದೊಂದಿಗೆ ಸಾಮಾಜಿಕ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ವಿವಿಧ ಲಯನ್ಸ್ ಕ್ಲಬ್‌ಗಳು ಶಾಶ್ವತ ಯೋಜನೆ ರೂಪಿಸಿದಲ್ಲಿ ಬೆಂಬಲ ನೀಡಲಾಗುವುದು. ವಿಟ್ಲ ಒಕ್ಕೆತ್ತೂರು ಸಮೀಪ ವಿಶೇಷ ಚೇತನ ಮಕ್ಕಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ವಿಟ್ಲ ಲಯನ್ಸ್ ಸೇವಾ ಟ್ರಸ್ಟ್ ಮತ್ತು ವಿಟ್ಲ ಲಯನ್ಸ್ ಕ್ಲಬ್‌ನಿಂದ ನಡೆಸುತ್ತಾ ಬಂದಿದ್ದ ಫಿಸಿಯೋಥೆರಪಿ ಮತ್ತು ಕಳೆದ ವರ್ಷ ಆರಂಭಿಸಿದ ಸ್ಪೀಚ್ ಥೆರಪಿಯನ್ನು ಜಿಲ್ಲಾ ಯೋಜನೆಯಾಗಿ ರೂಪಿಸಿ, ಕಟ್ಟಡ ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅವುಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.


ನಿಕಟಪೂರ್ವ ಗವರ್ನರ್ ರೊನಾಲ್ಡ್ ಗೋಮ್ಸ್ ಅವರು ೩೧೭ ಡಿ ಜಿಲ್ಲೆ ಗವರ್ನರ್ ಡಾ.ಗೀತಪ್ರಕಾಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಂತಾರಾಷ್ಟ್ರೀಯ ನಿರ್ದೇಶಕ ಎಂಡೋರ್ಸಿ ವಂಶಿ‘ರ ಬಾಬು, ಮಲ್ಟಿಪಲ್ ೩೧೭ ರ ಚೆಯರ್ಮೆನ್ ನಾಗರಾಜ್ ವಿ.ಬೆ‘ರಿ, ಅನಿತಾ ಗೋಮ್ಸ್ ಉಪಸ್ಥಿತರಿದ್ದರು. ಪ್ರಥಮ ಉಪಗವರ್ನರ್ ವಸಂತ ಕುಮಾರ್ ಶೆಟ್ಟಿ, ಡಾ.ದಿವ್ಯಾ ಶೆಟ್ಟಿ, ದ್ವಿತೀಯ ಉಪಗವರ್ನರ್ ಸಂಜೀತ್ ಶೆಟ್ಟಿ, ಪ್ರಗತಿ ಶೆಟ್ಟಿ, ಕ್ಯಾಬಿನೆಟ್ ಕಾರ್ಯದರ್ಶಿ ದಿನೇಶ್, ಕ್ಯಾಬಿನೆಟ್ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಲಿಯೋ ಅಧ್ಯಕ್ಷೆ ಶಿಬಾನಿ ಶೆಟ್ಟಿ, ಕ್ಯಾಬಿನೆಟ್ ಕೋಆರ್ಡಿನೇಟರ್ ಜಿ.ಆರ್.ಶೆಟ್ಟಿ, ಜಿಲ್ಲಾ ಗವರ್ನರ್ ಅವರ ಕೋಆರ್ಡಿನೇಟರ್ ಅರುಣಾ ಶೆಟ್ಟಿ, ಜಿಲ್ಲಾ ಪಿಆರ್‌ಒ ವಿಟ್ಲ ಮಂಗೇಶ್ ಭಟ್, ಡೈರೆಕ್ಟರಿ ಸಂಪಾದಕಿ ಆಶಾ ಸಿ.ಶೆಟ್ಟಿ ಮತ್ತಿತರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಇದೇ ಸಂದರ್ಭ “ಸೃಷ್ಟಿ” ಲಯನ್ಸ್ ಜಿಲ್ಲಾ ಡೈರೆಕ್ಟರಿ ಸಂಪಾದಕಿ ಆಶಾ ಸಿ.ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿನ್ನಿ ಮಸ್ಕರೇನ್ಹಸ್ ಮತ್ತು ಸಂಪಾದಕ ಮಂಡಳಿಯವರಿಗೆ ಹಾಗೂ ಪದಗ್ರಹಣ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ಗೀತಾ ಆರ್.ಶೆಟ್ಟಿ, ಕೋಶಾಧಿಕಾರಿ ಮತ್ತು ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಅವರನ್ನು ಸನ್ಮಾನಿಸಲಾಯಿತು. ಎನ್.ಟಿ.ರಾಜಾ ಅವರು ಸನ್ಮಾನಪತ್ರ ವಾಚಿಸಿದರು.
ಪದಗ್ರಹಣ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಸೌಜನ್ಯಾ ಹೆಗ್ಡೆ ನಿರೂಪಿಸಿದರು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತಾ ಎಸ್. ಮಸ್ಕರೇನ್ಹಸ್ ಧ್ವಜವಂದನೆ ಸಲ್ಲಿಸಿದರು. ರಚನಾ ಕಾಮತ್ ಆಶಯಗೀತೆ ಹಾಡಿದರು. ಸ್ವರೂಪ್ ಶೆಟ್ಟಿ ಸಹಕರಿಸಿದರು.

- Advertisement -

Related news

error: Content is protected !!