

ವಿಟ್ಲ: ಕೂಡೂರು ನಿವಾಸಿ ರಮಾನಂದ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಮೀನಾಕ್ಷಿ ಅವರನ್ನು, ಹಿರಿಯರನ್ನು ಗೌರವಿಸುವ ನಿಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಲಯನ್ಸ್ ಕ್ಲಬ್ ವಿಟ್ಲ ಸಿಟಿಯು ಸನ್ಮಾನಿಸಿದ್ದಾರೆ.
ಸುಮಾರು 92 ವರ್ಷ ಪ್ರಾಯದ ರಮಾನಂದ ಶೆಟ್ಟಿಯವರು (ನಿವೃತ್ತ ಜಂಟಿ ನಿರ್ದೇಶಕರು, ಪಶು ಸಂಗೋಪನ ಇಲಾಖೆ) ತನ್ನ ಈ ವಯಸ್ಸಿನಲ್ಲಿ ಕೂಡ ರಾಮಕೃಷ್ಣ ಸೊಸೈಟಿಯ ಅಧ್ಯಕ್ಷತೆಯನ್ನು ಕಳೆದ ಅನೇಕ ವರ್ಷಗಳಿಂದ ಯಶಸ್ವಿಯಾಗಿ, ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡುವ ಇವರನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿಯು ಗುರುತಿಸಿ ಅವರ ಸ್ವಗೃಹದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಸಂತ್ ಶೆಟ್ಟಿ ಎರ್ಮೆನಿಲೆ ವಲಯ ಅಧ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ, ಮಾಜಿ ಪ್ರಾಂತೀಯ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್ ವಿಟ್ಲ, ಉಪಾಧ್ಯಕ್ಷರಾದ ಮೋಹನ್ ಕಟ್ಟೆ, ಕೋಶಾಧಿಕಾರಿಗಳಾದ ದಿನಕರ ಆಳ್ವ, ಸಕ್ರಿಯ ಕಾರ್ಯಕರ್ತರಾದ ಓ ಎ ಕೃಷ್ಣ MJF, ಧರ್ಣಪ ಗೌಡ ಬನ, ಕೃಷ್ಣಪ್ಪ ಕುಲಾಲ್ , ಸದಾನಂದ ಗೌಡ ಸೇರಾಜೆ, ಮುಂತಾದವರು ಉಪಸ್ಥಿತರಿದ್ದರು