




ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಗೆ ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈ ಅವರ ಅಧಿಕೃತ ಭೇಟಿ ಅಂಗವಾಗಿ ವಿವಿಧ ಸೇವಾಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಪದವಿಪೂರ್ವ ಕಾಲೇಜಿಗೆ ಮ್ಯಾಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ನಿರಂತರವಾಗಿ ರಕ್ತದಾನ ಮಾಡುತ್ತಿರುವ ತುಳಸಿದಾಸ್ ಶೆಣೈ, ನ್ಯಾಷನಲ್ ಈಜುಗಾರ್ತಿ ಲಕ್ಷ್ಮೀ ದೈವ, ಪರಿಚಯ ವಿಶ್ವನಾಥ್, ಪಶುಸಂಗೋಪನೆ ಪಶುವೈದ್ಯ ಈಶ್ವರ ಭಟ್, ಕಬಡ್ಡಿ ಆಟಗಾರ ಹಾಗೂ ತೀರ್ಪುಗಾರ ಮಂಡಳಿ ಅಧ್ಯಕ್ಷ ಸುರೇಶ್ ಮಯೂರಡ್ಕ, ಡಾ. ಅಸೈನ್ ಆರ್ ಸೇರಿದಂತೆ ಹಲವರನ್ನು ಗೌರವಿಸಲಾಯಿತು.
ಇದೇ ವೇಳೆ ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈ ಅವರಿಗೂ ಸನ್ಮಾನ ನೆರವೇರಿಸಲಾಯಿತು.
ಸಭೆಯಲ್ಲಿ ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್, ಆರ್.ಸಿ. ಮಲ್ಲಿಕಾ ಬಂಡಾರಿ, ಝೆಡ್.ಸಿ. ವಸಂತ್ ಶೆಟ್ಟಿ, ರಾಜ್ಯಪಾಲರ ಸಂಯೋಜಕಿ ಜ್ಯೋತಿ ಶೆಟ್ಟಿ, ಕಾರ್ಯದರ್ಶಿ ದಿನಕರ್ ಆಳ್ವಾ, ಕೋಶಾಧಿಕಾರಿ ಸಂದೇಶ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ರವಿಕುಮಾರ್ ವಹಿಸಿದ್ದರು.








