



ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317 ಡಿಯ ಅಕ್ಟೋಬರ್ ತಿಂಗಳ ಮಾಸಿಕ ಕಾರ್ಯಕ್ರಮ ಮಾನಸಿಕ ಆರೋಗ್ಯ ಅರಿವು – ಮನೋಮಿತ್ರಂ ಕಾರ್ಯಕ್ರಮ ನಗರದ ರೊಶನಿ ನಿಲಯ ಕಾಲೇಜ್ ಆಫ್ ಸೋಶಿಯಲ್ ವರ್ಕ್ ದ ಅಡಿಟೋರಿಯಂನಲ್ಲಿ ನಡೆಯಿತು.
ಕಾಲೇಜಿನ ಮಾಜಿ ಪ್ರಾಂಶುಪಾಲೆ ಜೆಸಿಂತಾ ಡಿಸೋಜಾ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಚಾಲನೆ ನೀಡಿ ಮಾತನಾಡಿ ಕಾಲಚಕ್ರ ಬದಲಾದಂತೆ ಮಾನಸಿಕ ಆರೋಗ್ಯ ದಂತಹ ಹೊಸ ಹೊಸ ವಿಷಯಗಳನ್ನು ನಾವು ಅರಿತುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಂಗಳೂರು ಹಾಗೂ ಕೊಡಗು ಜಿಲ್ಲೆಯನೊಳಗೊಂಡ ಲಯನ್ಸ್ ಜಿಲ್ಲೆ 317ಡಿಯ ತಿಂಗಳ ವಿಶೇಷ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ ತಿಂಗಳ ಕಾರ್ಯಕ್ರಮವಾಗಿ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಮನೋಮಿತ್ರಂ ನ್ನು ವಿವಿಧ ಶಾಲಾ ಕಾಲೇಜುಗಳಲ್ಲಿ ಲಯನ್ಸ್ ಕ್ಲಬ್ಬುಗಳ ಮುಖಾಂತರ ಮಾಹಿತಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞೆ ಡಾ.ರಮಿಲಾ ಶೇಖರ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಸುಪ್ರಿಯ ಹೆಗಡೆ ಆರೂರ್, ಯೆನೆಪೋಯ ನರ್ಸಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ವಿಜಿ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾನಸಿಕ ಆರೋಗ್ಯ ಅರಿವು ವಿಚಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ನ ಜಿಲ್ಲಾ ಸೇವಾ ಮುಖ್ಯ ಸಂಯೋಜಕ ರಮಾನಂದ ನೂಜಿಪಾಡಿ ಮಾತನಾಡಿದರು.
ಮನೋಮಿತ್ರಂ ಕಾರ್ಯಕ್ರಮ ಸಂಯೋಜಕಲಯನ್ಸ್ ನ ಸುರೇಶ ಎಂ ಎಸ್ ಕಾಲೇಜಿನ ಡೀನ್ ಡಾ. ಮೀನಾ ಮೊಂತೆರೊ ಕಾರ್ಯಕ್ರಮ ಸಂಘಟಿಸಿದರು. ಕಾಲೇಜಿನ ಪ್ರಾಧ್ಯಾಪಕಿ ರಮ್ಯಾ ಸ್ವಾಗತಿಸಿದರು ಗೌತಮಿ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಾಲೇಜಿನಿಂದ ಭಾಗವಹಿಸಿದ ಸುಮಾರು 75 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲರವರು ನಿರ್ವಹಿಸಿದರು.








