- Advertisement -
- Advertisement -



ಬೆಂಗಳೂರು: ಸರ್ಕಾರವು ಉಪ್ಪು, ಸಕ್ಕರೆ ಬಳಕೆಗೆ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ಬಳಕೆಗೆ ಮಾರ್ಗಸೂಚಿ ಹೊರಡಿಸಿದೆ.
ಮನೆಯಲ್ಲಿ ಅಡುಗೆ ಎಣ್ಣೆ ಮರುಬಳಕೆ, ಸಣ್ಣ ಆಹಾರ ಉತ್ಪಾದನಾ ಘಟಕಗಳಿಗೆ ಅಡುಗೆ ಎಣ್ಣೆ ಮರುಬಳಕೆಗೆ ಮಾರ್ಗಸೂಚಿ ಹಾಗೂ ದೊಡ್ಡ ಆಹಾರ ಉತ್ಪಾದಕ ಘಟಕಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಡುಗೆ ಎಣ್ಣೆ ಮರುಬಳಕೆಯಿಂದ ಆಗುವ ಅನಾಹುತ ತಪ್ಪಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.
ಅಡುಗೆ ಎಣ್ಣೆ ಮರುಬಳಕೆಗೆ ಮಾರ್ಗಸೂಚಿ:
- ಮನೆ ಮಟ್ಟದಲ್ಲಿ ಕರಿದ ಆಹಾರಕ್ಕೆ ಬಳಸಿದ ಎಣ್ಣೆಯನ್ನು ಫಿಲ್ಟರ್ ಮಾಡಿ, ಕರ್ರಿ ತಯಾರಿಕೆಗೆ ಬಳಸಬಹುದು, ಅದೇ ಎಣ್ಣೆಯನ್ನು ಕರಿಯಲು ಮತ್ತೆ ಬಳಸುವುದನ್ನು ತಪ್ಪಿಸಿ.
- ನೀಲಿ-ಬೂದು ಹೊಗೆ, ಗಟ್ಟಿ ನೊರೆ, ಕಪ್ಪು, ಮಸುಕು ಅಥವಾ ಸ್ಥಿರತೆ ಬದಲಾವಣೆ ಕಂಡರೆ ಮರುಬಳಕೆಯನ್ನು ತ್ಯಜಿಸಿ.
- ಬಳಸಿದ ಅಡುಗೆ ಎಣ್ಣೆಯನ್ನು ಒಂದು ಅಥವಾ ಎರಡು ದಿನದಲ್ಲಿ ಬಳಸಬೇಕು. ಹೆಚ್ಚು ಕಾಲ ಸಂಗ್ರಹಿಸಬೇಡಿ, ಏಕೆಂದರೆ ಬಳಸಿದ ಎಣ್ಣೆ ಹಾಳಾಗುವ ದರ ಹೆಚ್ಚು.
- ತಾಜಾ ಎಣ್ಣೆಯ ಪಾತ್ರೆಗೆ ಬಳಸಿದ ತುಂಬಿಸಬೇಡಿ, ಪ್ರತ್ಯೇಕವಾಗಿ ಸಂಗ್ರಹಿಸಿ.
- ಸಣ್ಣ ಪ್ರಮಾಣದ ಬಳಸಿದ ಎಣ್ಣೆ ವಿಲೇವಾರಿ ಮಾಡಲು ಎಣ್ಣೆಯನ್ನು ಮರಳು, ಮರದ ಪುಡಿ, ಬಳಸಿದ ಟವೆಲ್, ಪೇಪರ್ ಟವೆಲ್, ಆಹಾರದ ತ್ಯಾಜ್ಯದಂತಹ ಹೀರಿಕೊಳ್ಳುವ ವಸ್ತುವಿನೊಂದಿಗೆ ಬೆರೆಸಿ.
- ಚೆಲ್ಲುವ ಸಾಧ್ಯತೆ ತಪಿಸಿ, ನಂತರ ಕಸದ ಬುಟ್ಟಿಯಲ್ಲಿ ಎಸೆಯಿರಿ.
ಸಣ್ಣ ಆಹಾರ ಉತ್ಪಾದನಾ ಘಟಕಗಳಿಗೆ ಅಡುಗೆ ಎಣ್ಣೆ ಮರುಬಳಕೆಗೆ ಮಾರ್ಗಸೂಚಿ:
- ಒಂದೇ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಳಸಬೇಡಿ, ಒಮ್ಮೆ ಮಾತ್ರ ಬಳಸುವುದು ಉತ್ತಮ.
- ಆಹಾರದ ಕಣಗಳನ್ನು ತೆಗೆಯಲು ಅಡುಗೆ ಎಣ್ಣೆಯನ್ನು ಆಗಾಗ್ಗೆ ಫಿಲ್ಟರ್ ಮಾಡಬೇಕು.
- ನೀಲಿ-ಬೂದು ಹೊಗೆ ಕಾಣಿಸಿಕೊಂಡಾಗ ಅಥವಾ ಗಟ್ಟಿ ನೊರೆ ಬಂದಾಗ ಅಥವಾ ಎಣ್ಣೆ ಕಪ್ಪು ಮತ್ತು ಮಸುಕಾದಾಗ ಅಥವಾ ಎಣ್ಣೆಯ ಸ್ಥಿರತೆ ಬದಲಾದಾಗ ಎಣ್ಣೆಯನ್ನು ವಿಲೇವಾರಿ ಮಾಡಬೇಕು.
- ತ್ಯಜಿಸಿದ ಎಣ್ಣೆಯನ್ನು ಚರಂಡಿ/ಒಳಚರಂಡಿ ವ್ಯವಸ್ಥೆಯಲ್ಲಿ ಸುರಿಯಬೇಡಿ.
- ಎಣ್ಣೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಅದರಲ್ಲೂ ರಾಜ್ಯ ಬಯೋಡೀಸೆಲ್ ಮಂಡಳಿಗಳು, ಬಯೋಡೀಸೆಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ ನೀಡಬೇಕು
- ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ ಇತರ ಸಂಸ್ಥೆಗಳಲ್ಲಿ ನೋಂದಾಯಿತವಾಗಿರುವ ಅಧಿಕೃತ ಯುಸಿಒ ಅಗ್ರಿಗರ್ಸ್ / ಸಂಗ್ರಹ ಏಜೆನ್ಸಿಗಳಿಗೆ ನೀಡುವ ಮೂಲಕ, ಅವರು ಅದನ್ನು ಬಯೋಡೀಸೆಲ್ ಅಥವಾ ಯಾವುದೇ ಕೈಗಾರಿಕಾ ಉದ್ದೇಶಕ್ಕೆ ಬಳಸುತ್ತಾರೆ.
- ಯುಸಿಒವನ್ನು ಬೆಂಕಿ, ಗ್ಯಾಸ್ ಸಿಲಿಂಡರ್ ಇತ್ಯಾದಿಗಳಿಂದ ದೂರ ಇಡಿ.
- ಎಫ್ಬಿಒಗಳು ತಮ್ಮ ಆಹಾರ ಉತ್ಪನ್ನ ತಯಾರಿಕೆಗೆ ಯುಸಿಒ ಖರೀದಿಸುವುದನ್ನು ತಪ್ಪಿಸಬೇಕು.
ದೊಡ್ಡ ಆಹಾರ ಉತ್ಪಾದಕ ಘಟಕಗಳಿಗೆ ಮಾರ್ಗಸೂಚಿ:
- ಟೋಟಲ್ ಪೊಲಾರ್ ಕಾಂಪೌಂಡ್ಸ್ 25% ಮಿತಿ ಮೀರಿದ ಅಡುಗೆ ಎಣ್ಣೆಗಳು ಅಪಾಯಕಾರಿ ತ್ಯಾಜ್ಯ. ಅಂತಹ ಖಾದ್ಯ ತೈಲವನ್ನು ತ್ಯಜಿಸಿ.
- ತಣ್ಣಗಾದ ನಂತರ ತ್ಯಜಿಸಿದ ಎಣ್ಣೆಯನ್ನು ಪ್ರತ್ಯೇಕ ಪಾತ್ರೆಯಲ್ಲಿ ಇಡಿ. ತುಂಬಿಸುವಾಗ ಹೆಡ್ಸ್ಪೇಸ್ ಇಡಿ. ಅಡ್ಡ-ಮಾಲಿನ್ಯ ತಪ್ಪಿಸಲು ಪಾತ್ರೆಗೆ ಯಾವಾಗಲೂ ಲೇಬಲ್ ಹಾಕಿ.
- ಬಿಸಿ ಎಣ್ಣೆಯನ್ನು ವರ್ಗಾಯಿಸಬೇಡಿ, ಚೆಲ್ಲುವ ಮತ್ತು ಗಾಯದ ಸಾಧ್ಯತೆ ಇದೆ. ಬಳಸಿದ ಅಡುಗೆ ಎಣ್ಣೆಯನ್ನು ಅಧಿಕೃತ ಸಂಗ್ರಹ ಏಜೆನ್ಸಿ ನೀಡಿದ ಸಂಗ್ರಹ ಡ್ರಮ್ಗಳಿಗೆ ಸುರಕ್ಷಿತವಾಗಿ ವರ್ಗಾಯಿಸಿ.
- ಬಳಸಿದ ಅಡುಗೆ ಎಣ್ಣೆಯನ್ನು ಬೆಂಕಿ, ಗ್ಯಾಸ್ ಸಿಲಿಂಡರ್ ಇತ್ಯಾದಿಗಳಿಂದ ದೂರ ಇಡಿ.
- ಸಣ್ಣ ಎಫ್ಬಿಒಗಳಂತೆ ಅಧಿಕೃತ ಏಜೆನ್ಸಿಗಳಿಗೆ ನೀಡಿ, ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಿ.
- ಎಲ್ಲಾ ಎಫ್ಬಿಒಗಳು ಯುಸಿಒ ನಿರ್ವಹಣೆ ಮತ್ತು ವಿಲೇವಾರಿಗೆ ಜವಾಬ್ದಾರರಾದ ತಮ್ಮ ಸಿಬ್ಬಂದಿಗೆ ಈ ದಾಖಲೆಯಲ್ಲಿ ಸೂಚಿಸಲಾದ ಕಾರ್ಯವಿಧಾನಗಳ ಬಗ್ಗೆ ತರಬೇತಿ ನೀಡಬೇಕು.
- Advertisement -








