ಮಹಿಳೆಯರಲ್ಲಿ ಉತ್ತಮ ಸಾಧನೆ ಮಾಡಿದ ಮಂಜುಳಾ ಮತ್ತು ಶಿಖಾ ಸುಶೀಲ್ ಇವರಿಗೆ ಗೌರವಾರ್ಪಣೆ



ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317-ಡಿ ವತಿಯಿಂದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯಪಾಲರಾದ ಅರವಿಂದ ಶಣೈ ಮತ್ತು ಪ್ರಥಮ ಮಹಿಳೆ ಮಮತಾ ಶಣೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಸಂಯೋಜಿಕೆ ವಾಣಿ ವಿ ಆಳ್ವ ವಹಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರಲ್ಲಿ ಉತ್ತಮ ಸಾಧನೆ ಮಾಡಿದ ಮಂಜುಳಾ ಮತ್ತು ಶಿಖಾ ಸುಶೀಲ್ ಇವರನ್ನು ಗೌರವಿಸಲಾಯಿತು.


ಮುಖ್ಯ ಅತಿಥಿಗಳಾಗಿ ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕಿ ನಾಜಿ ಸುಲ್ತಾನ್ ಭಾಗವಹಿಸಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ದ್ವಿತೀಯ ಉಪರಾಜ್ಯಪಾಲರಾದ ಗೋವರ್ಧನ್ ಶೆಟ್ಟಿ, ಕಾರ್ಯದರ್ಶಿ ಎಚ್.ಆರ್ ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ರಾಜ್ಯಪಾಲರ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ, ಸಂಪುಟ ಸಂಯೋಜಕ ನ್ಯಾನ್ಸಿ ಮಸ್ಕರ್ ರಂಜಸ್, ಮನೋರಂಜನ್ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗ, ಕಾಲೇಜ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಣ್ಣಪ್ಪ ನಾಯಕ್ ಕಾರ್ಯಕ್ರಮದ ಜಿಲ್ಲಾಧ್ಯಕ್ಷರುಗಳು ಸಂಯೋಜಕರು ಉಪಸ್ಥಿತರಿದ್ದರೆಂದು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.








