Thursday, June 11, 2026
spot_imgspot_img
spot_imgspot_img

ವಿಟ್ಲ: ಮಾದಕ ವಸ್ತು ಸಾಗಾಟ..! ಮೂವರನ್ನು ಹೆಡೆಮುರಿ ಕಟ್ಟಿ ಬಂಧಿಸಿದ ವಿಟ್ಲ ಪೊಲೀಸರು

- Advertisement -
- Advertisement -

ವಿಟ್ಲ: ಗಾಂಜಾ ಸಾಗಿಸುತ್ತಿದ್ದ ಮೂವರನ್ನು ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೊಳ್ನಾಡು ಗ್ರಾಮದ ಬೊಳ್ವಾದೆ ಎಂಬಲ್ಲಿ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಮಂಚಿಯ ದರೋಡೆ ಪ್ರಕರಣದ ಆರೋಪಿ ಒಕ್ಕೆತ್ತೂರು ಫೈಝಲ್, ಕುಖ್ಯಾತ ಅಂತರಾಜ್ಯ ಡ್ರಗ್ ಪೆಡ್ಲರ್ ನೆಲ್ಲಿಗುಡ್ಡೆ ನಿವಾಸಿ ರಹೀಮ್ ಯಾನೆ ರಹಿಮಾನ್ (ಮೂಲತಃ ತುಂಬೆ), ಕುಖ್ಯಾತ ಗಾಂಜಾ ಸಾಗಾಟಗಾರ ಜಲಾಲುದ್ದೀನ್ ಕಟ್ಟತ್ತಿಲ್ಲ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಮಾದಕವಸ್ತು ಎಂಡಿಎಮ್‌ಎ, ಗಾಂಜಾ, ತಲ್ವಾರು ಸಹಿತ ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಸಬ್‌ಇನ್ಸ್ಪೆಕ್ಟರ್ ಸಂದೀಪ್, ಮಂಜುನಾಥ್, ಸಿಬ್ಬಂದಿಗಳಾದ ಹೇಮಾರಾಜ್, ಅಶೋಕ್, ವಿಠಲ್ ರವರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!