ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಹಾಗೂ ವಿಟ್ಲ-ಪುತ್ತೂರು ಟೋಪ್ಕೋ ಜ್ಯುವೆಲ್ಲರಿ ಸಹಯೋಗದಲ್ಲಿ ಕೋವಿಡ್-೧೯ ನಿರ್ವಹಣೆ-ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರ ವಿಟ್ಲದ ಒಕ್ಕೆತ್ತೂರು ಲಯನ್ಸ್ ಕಚೇರಿಯಲ್ಲಿ ಗುರುವಾರ ನಡೆಯಿತು.ಕಾರ್ಯಾಗಾರವನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ಉದ್ಘಾಟಿಸಿ, ಮಾತನಾಡಿ ದಿನೇ ದಿನೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸೋಂಕು ಯಾವ ಮೂಲದಿಂದ ಹರಡುತ್ತದೆ ಎಂಬ ಬಗ್ಗೆ ಜನರಿಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಜನರು ಜಾಗೃತರಾಗುವುದು ಮುಖ್ಯವಾಗಿದೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಕೊರೊನಾ ಬಗ್ಗೆ ಜಾಗೃತರಾಗಲು ಇಂತಹ ಕಾರ್ಯಾಗಾರಗಳು ನಡೆಯಬೇಕು ಎಂದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವೇದವತಿ ಮಾತನಾಡಿ ಕೊರೊನಾ ಸೋಂಕಿನಿಂದ ಪಾರಾಗಲು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮುಖ್ಯ ಕಾರ್ಯವಾಗಿದೆ ಎಂದರು.



ಮಂಗಳೂರು ಸಾಮಾಜಿಕ ಕಾರ್ಯಕರ್ತ ಉಮ್ಮರ್ ಯು.ಎಚ್ ಕಾರ್ಯಾಗಾರ ನಡೆಸಿಕೊಟ್ಟರು. ಶಿಬಿರಾರ್ಥಿಗಳಿಗೆ ಮಾಸ್ಕ್ ವಿತರಿಸಲಾಯಿತು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತಾ ಮಸ್ಕರೇಂಞಸ್ ಅಧ್ಯಕ್ಷತೆ ವಹಿಸಿದ್ದರು.ಟೋಪ್ಕೋ ಜ್ಯುವೆಲ್ಲರಿ ಪಾಲುದಾರ ಮೊಹಮ್ಮದ್ ಟಿ.ಕೆ, ಎಂ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ, ಮಂಗೇಶ್ ಭಟ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ವಿನ್ನಿ ಮಸ್ಕರೇಂಞಸ್ ಉಪಸ್ಥಿತರಿದ್ದರು.ಉಮಾ ಬೆಹನ್ ಹಾಗೂ ಸ್ಮಿತಾ ನಿರೂಪಿಸಿದರು. ಲಯನ್ಸ್ ಜಿಲ್ಲೆಯ ಪ್ರಾಂತೀಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ ವಂದಿಸಿದರು. ಜೆಸಿಂತಾ ಮಸ್ಕರೇಂಞಸ್ ಸ್ವಾಗತಿಸಿದರು.

