- Advertisement -
- Advertisement -
ವಿಟ್ಲ: ಗುರುವಾರದಿಂದ ಲಾಕ್ ಡೌನ್ ಗೆ ಕರೆ ನೀಡಿರುವುದರಿಂದ ವಿಟ್ಲದಲ್ಲಿ ಜನರು ಅಗತ್ಯ ಸಾಮಗ್ರಿ ಖರೀದಿಸಲು ಮುಗಿ ಬಿದ್ದಿದ್ದಾರೆ.
ಜಿಲ್ಲಾಡಳಿತ ಈಗಾಗಲೇ ಗುರುವಾರದಿಂದ ದ.ಕ ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಗೆ ಕರೆ ನೀಡಿದೆ. ಮಂಗಳವಾರ ಮತ್ತು ಬುಧವಾರ ಸಾಮಗ್ರಿ ಖರೀದಿಸಲು ಅವಕಾಶ ನೀಡಿದ್ದರಿಂದ ವಿಟ್ಲ ಪೇಟೆಯಲ್ಲಿ ಜನದಟ್ಟಣೆ ಉಂಟಾಗಿದೆ. ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂಭಾಗ ಜನರು ಸರತಿ ಸಾಲಿನಲ್ಲಿ ನಿಂತು ಸಾಮಗ್ರಿ ಖರೀದಿಸಿದರು. ಇನ್ನೂ ವಿಟ್ಲದ ಪ್ರಮುಖ ಬ್ಯಾಂಕ್ ನಲ್ಲಿಯೂ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ವಿಟ್ಲ ಸುತ್ತಮುತ್ತಲಿನ ಗ್ರಾಮದ ಜನರು ಒಮ್ಮೆಗೆ ಪೇಟೆಗೆ ಆಗಮಿಸಿದ್ದರಿಂದ ವಾಹನ ದಟ್ಟಣೆ ಉಂಟಾಗಿದೆ.
- Advertisement -