Friday, March 29, 2024
spot_imgspot_img
spot_imgspot_img

ನಾಳೆ ನಿಯಮ ಮೀರಿ ವಾಹನಗಳು ರಸ್ತೆಗಿಳಿದ್ರೆ ಬೀಳುತ್ತೆ ಕೇಸ್: ಕಮಿಷನರ್..

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಬೆಂಗಳೂರು: ಕೊರೊನಾ ನಿಯಂತ್ರಣ ಹಿನ್ನಲೆಯಲ್ಲಿ ನಾಳೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಿರುತ್ತದೆ. ಆದರೆ ನಿಯಮ ಮೀರಿ ವಾಹನಗಳು ರಸ್ತೆಗಿಳಿದ್ರೆ ಮುಲಾಜಿಲ್ಲದೆ ಕೇಸ್ ಬೀಳುತ್ತೆ ಎಂದು ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ.

ನಾಳೆಯ ಲಾಕ್ ಡೌನ್ ಉದ್ದೇಶಿಸಿ ಮಾತನಾಡಿದ ಅವರು, ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ತನಕ  ಕರ್ಪ್ಯೂ ಜಾರಿಯಲ್ಲಿರುತ್ತದೆ. ಒಂದು ವೇಳೆ ನಿಯಮ ಮೀರಿ ವಾಹನಗಳು ರಸ್ತೆಗಿಳಿದ್ರೆ ಶಿಸ್ತು ಕ್ರಮ ಜರುಗಿಸಲಾಗುವುದು. ಮುಲಾಜಿಲ್ಲದೆ ಕೇಸ್ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ವಾರ್ನಿಂಗ್ ಮಾಡಿದ್ದಾರೆ.

ಇನ್ನು ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಅಗತ್ಯ ಸೇವಗಳಿಗೆ ಅವಕಾಶವಿದೆ. ಇಂದು ರಾತ್ರಿ 8 ಗಂಟೆಯಿಂದ ನಗರದ ಎಲ್ಲ ಮೇಲ್ಸೆತುವೆಗಳು ಬಂದ್ ಆಗಲಿವೆ. ಹೀಗಾಗಿ ಹಿಂದಿನ ಭಾನುವಾರದಂತೆ ನಾಳೆಯೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!