Monday, June 30, 2025
spot_imgspot_img
spot_imgspot_img

ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ; ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಎಪ್ರಿಲ್‌ 26 ಹಾಗೂ ಮೇ 7 ರಂದು ಚುನಾವಣೆ

- Advertisement -
- Advertisement -
This image has an empty alt attribute; its file name is Lakshmi-Ganesh-2-1024x683.jpg

2024ರ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ತಕ್ಷಣದಿಂದಲೇ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.. ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಬರಲಿದೆ.

ಮೊದಲ ಹಂತದ ಚುನಾವಣೆ ಎಪ್ರಿಲ್‌ 19, ಎರಡನೇ ಹಂತದ ಚುನಾವಣೆ ಎಪ್ರಿಲ್‌ 26, ಮೂರನೇ ಹಂತದ ಚುನಾವಣೆ ಮೇ 7, ನಾಲ್ಕನೇ ಹಂತದ ಚುನಾವಣೆ ಮೇ 13, ಐದನೇ ಹಂತದ ಚುನಾವಣೆ ಮೇ 20, ಆರನೇ ಹಂತದ ಚುನಾವಣೆ ಮೇ 25 ಹಾಗೂ ಏಳನೇ ಹಂತದ ಚುನಾವಣೆ ಜೂನ್‌ 1 ರಂದು ನಡೆಯಲಿದೆ.

ಕರ್ನಾಟಕದ 28 ಕ್ಷೇತ್ರಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ.

- Advertisement -

Related news

error: Content is protected !!