Saturday, November 2, 2024
spot_imgspot_img
spot_imgspot_img

ವಿ.ಹಿಂ. ಪ ಮುಖಂಡ ಶರಣ್‌‌ ಪಂಪ್‌ವೆಲ್‌‌‌ಗೆ ಸಾಮಾಜಿಕ ಜಾಲತಾಣದಲ್ಲಿ ಧಮ್ಕಿ ಪ್ರಕರಣ

- Advertisement -
- Advertisement -

ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ – ಪುತ್ತೂರು ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್

ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಸವಾಲು ಹಾಕಿದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಅವರ ನಡೆಯನ್ನು ಖಂಡಿಸಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಈ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಮಾಜ ಮೌನವಾಗಿದೆ, ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದರೆ ಅದು ನಿಮ್ಮ ಮೂರ್ಖತನ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಹೊರಟರೆ ಏನಾಗಬಹುದೂ ಎಂದು ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದ್ದಾರೆ.

ಮತೀಯವಾದಿ ದೇಶದ್ರೋಹಿ ಸಂಘಟನೆಗಳ ಬೆಂಬಲದಿಂದ ಜನಪ್ರತಿನಿಧಿಯಾಗಿ ಇದ್ದುಕೊಂಡು ದೇಶದ್ರೋಹಿ ಸಂಘಟನೆಗಳ ಋಣ ಸಂದಾಯ ಮಾಡಲು ಈ ರೀತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಿಗೆ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧ. ಪೋಲಿಸ್ ಇಲಾಖೆ ಇಂಥವರ ಹಾಗೂ ಇವರನ್ನು ಪ್ರೇರೆಪಿಸುವವರ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಇಂತವರಿಂದ ಸಮಾಜವನ್ನು ರಕ್ಷಿಸಬೇಕು ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು.

- Advertisement -

Related news

error: Content is protected !!