Thursday, July 23, 2026
spot_imgspot_img
spot_imgspot_img

ಹೊಸ ವರ್ಷಕ್ಕೆ LPG ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆ

- Advertisement -
- Advertisement -

ನವದೆಹಲಿ: 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 111 ರೂ. ಹೆಚ್ಚಿಸಲಾಗಿದ್ದು, ಇದು ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇವೆ ಮತ್ತು ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರಲಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗೃಹ ಬಳಕೆಯ ಪೈಪ್ಡ್ ನೈಸರ್ಗಿಕ ಅನಿಲ ದರವನ್ನು ಪ್ರತಿ ಸ್ಟ್ಯಾಂಡರ್ಡ್‌ ಕ್ಯೂಬಿಕ್ ಮೀಟರ್‌ಗೆ 0.70 ರೂ. ಇಳಿಕೆ ಮಾಡಲಾಗಿದೆ. ಗೃಹ ಬಳಕೆಯ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ.

ಭಾರತೀಯ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ದಿನ ಅಂತಾರಾಷ್ಟ್ರೀಯ ತೈಲ ದರಗಳ ಆಧಾರದಲ್ಲಿ ಎಲ್‌ಪಿಜಿ ದರಗಳನ್ನು ಪರಿಷ್ಕರಿಸಲಾಗುತ್ತದೆ. ಈ ಬಾರಿ ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆಯಾಗಿದ್ದು, ದೆಹಲಿಯಲ್ಲಿ ಹಿಂದೆ 1,580.50 ರೂ. ಇದ್ದ 19 ಕೆ.ಜಿ. ಸಿಲಿಂಡರ್ ಈಗ 1,691.50 ರೂ.ಗೆ ಲಭ್ಯವಾಗಲಿದೆ. ಈ ಏರಿಕೆಯಿಂದ ಆಹಾರ ದರಗಳ ಮೇಲೂ ಪರೋಕ್ಷ ಪ್ರಭಾವ ಬೀರಬಹುದು.

- Advertisement -

Related news

error: Content is protected !!