


ಮಾಣಿ : ಉಳುಹಿಯ್ಯತ್ ನೀಡುವುದು ಬಹಳ ಪುಣ್ಯವಿರುವ ಕರ್ಮವಾಗಿದೆ ಸಾಧ್ಯವಿರುವವರು ಪ್ರತೀ ವರ್ಷವೂ ಮತ್ತು ಸಾಧ್ಯವಾಗದವರು ಜೀವನದಲ್ಲಿ ಒಮ್ಮೆಯಾದರೂ ಉಳುಹಿಯ್ಯತ್ ದಾನ ನೀಡಲು ಪ್ರಯತ್ನಿಸಿರಿ ಅದು ಮರಣಾನಂತರದ ನಮ್ಮ ಜೀವನದಲ್ಲಿ ವಾಹನವಾಗಿ ಬಂದು ನಮಗೆ ಸಹಕರಿಸುತ್ತದೆ ಎಂದು ಉಳ್ಳಾಲ ಕೇಂದ್ರ ಮಸೀದಿಯ ಖತೀಬರೂ ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಇದರ ಅಧ್ಯಕ್ಷರೂ ಆದ ಬಹು|ಇಬ್ರಾಹಿಂ ಸಅದಿ ಮಾಣಿ ಹೇಳಿದರು.
ಅವರು ಕೆಎಂಜೆ, ಎಸ್‌ವೈಎಸ್,ಎ ಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ನಡೆದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು. ಕೆಸಿಎಫ್ ರಿಯಾದ್ ಝೋನ್ ಪ್ರೆಸಿಡೆಂಟ್ ಮುಸ್ತಫಾ ಸಅದಿ ಸೂರಿಕುಮೇರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕೆಎಂಜೆ ಜಿಲ್ಲಾ ನಾಯಕ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಕೆಎಂಜೆ ಸೂರಿಕುಮೇರು ಉಸ್ತುವಾರಿ ಹಬೀಬ್ ಶೇರಾ, ಪ್ರಮುಖರಾದ ಇಸ್ಮಾಯಿಲ್ ಹಾಜಿ ಬುಡೋಳಿ, ಎಸ್ ಕೆ ಆಶ್ರಫ್ ಗಡಿಯಾರ್, ಯೂಸುಫ್ ಹಾಜಿ ಸೂರಿಕುಮೇರು, ಅಬ್ದುಲ್ ಕರೀಂ ನೆಲ್ಲಿ, ಅಝೀಂ ನೆಲ್ಲಿ,ಇಬ್ರಾಹಿಂ ಮುಸ್ಲಿಯಾರ್ ಮಾಣಿ ,ಹಸೈನಾರ್ ಹಾಜಿ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಅದಂ ನೆಲ್ಲಿ, ಹಂಝ ಸೂರಿಕುಮೇರು, ಹಸೈನ್ ಟೈಲರ್, ಫಾರೂಕ್ ಯೂಸುಫ್, ಇಮ್ರಾನ್ ಸೂರಿಕುಮೇರು, ಮುನೀರ್ ಮಾಣಿ, ಹಲವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.