Tuesday, April 20, 2021
spot_imgspot_img
spot_imgspot_img

ಸೂರಿಕುಮೇರು ಎಸ್‌ವೈ‌ಎಸ್ ನಿಂದ ಪ್ರಾರ್ಥನಾ ದಿನ

ಮಾಣಿ: ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಹಾಗೂ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ವತಿಯಿಂದ ಎಸ್‌ವೈ‌ಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ಅಕ್ಟೋಬರ್ 2 ಶುಕ್ರವಾರ ಬೇಕಲ ಉಸ್ತಾದರಿಗಾಗಿ ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಯಿತು.

ಕೆಸಿಎಫ್ ಕಾರ್ಯಕರ್ತ ಸಲೀಂ ಸೂರಿಕುಮೇರು ರವರ ನಿವಾಸದಲ್ಲಿ ನಡೆದ ಕಾರ್ಯಕ್ರಮವನ್ನು ಅಶ್ರಫ್ ಸಖಾಫಿ ಸೂರಿಕುಮೇರು ಉದ್ಘಾಟಿಸಿದರು, ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿದರು,ಉಸ್ತಾದ್ ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಅಲ್ ಹಾಜ್ ಇಬ್ರಾಹಿಂ ಸಅದಿ ಮಾಣಿ ಮುಖ್ಯ ಪ್ರಭಾಷಣ ನಡೆಸಿದರು, ಬಳಿಕ ಖತಮುಲ್ ಕುರ್‌ಆನ್ ,ತಹ್ಲೀಲ್ ಸಮರ್ಪಣೆ,ಮಹ್‌ಳರತುಲ್ ಬದ್ರಿಯಾ ಮಜ್ಲಿಸ್,ದುಆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಸೆಂಟರ್ ನಾಯಕರಾದ ಸುಲೈಮಾನ್ ಸೂರಿಕುಮೇರು,ಕರೀಂ ನೆಲ್ಲಿ,ಹಂಝ ಕಾಯರಡ್ಕ,ಯೂಸುಫ್ ಹಾಜಿ,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಅಬ್ದುಲ್ ಫತ್ತಾಹ್,ಅಶ್ರಫ್ ಪಾರ್ಪಕಜೆ,ಇಸಾಕ್ ಮಾಣಿ,ನೌಶಾದ್ ಉಮರ್ ಸೂರಿಕುಮೇರು,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು‌.ಕುಂಡೂರು ಉಸ್ತಾದರ ಬೈತ್‌ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು,ಮುಈನುದ್ದೀನ್ ಮಾಣಿ ಧನ್ಯವಾದಗೈದರು.

- Advertisement -

MOST POPULAR

HOT NEWS

Related news

error: Content is protected !!