Friday, May 3, 2024
spot_imgspot_img
spot_imgspot_img

ವಿಟ್ಲ : ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

- Advertisement -G L Acharya panikkar
- Advertisement -

ಯಮ-ನಿಯಮ ಧಾರಣ ಯುಕ್ತ ವಿಶ್ವ ಯೋಗ ದಿನಾಚರಣೆ 2023 ವಸುದೈವ ಕುಟುಂಬಕ್ಕಾಗಿ – ಶ್ರೀ ಆಚಾರ್ಯ ಅಜಿತ್ ಗುರೂಜಿ

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನವನ್ನು “ನಮಸ್ಕಾರದಿಂದ ಸಂಸ್ಕಾರದೆಡೆಗೆ” ಎಂಬ ಸಂದೇಶದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆಚಾರ್ಯ ಅಜಿತ್ ಗುರೂಜಿ ಅವರು ಸನಾತನ ಭಾರತ ವಿಶ್ವದ ಸರ್ವ ರಾಷ್ಟ್ರಗಳ ಒಳಿತನ್ನು ಬಯಸುವುದರಿಂದ ಯಮ-ನಿಯಮ ಧಾರಣ ಯುಕ್ತ ವಿಶ್ವ ಯೋಗ ದಿನಾಚರಣೆ 2023 ವಸುದೈವ ಕುಟುಂಬಕ್ಕಾಗಿ ಎಂಬ ಸಂದೇಶ ವ್ಯಾಪಾಕವಾಗಲೆಂದು ಶುಭ ಹಾರೈಸಿದರು.

ಶಾಲಾ ಯೋಗ ಗುರುಗಳಾದ ಕುಶಲರವರು ನಿರಂತರ ಪ್ರಯತ್ನವೇ ಯೋಗ, ಇದು ದಿನಚರಿಯೊಳಗೆ ಸೇರಿಕೊಂಡು ವಿಶ್ವದ ಆರೋಗ್ಯ ಸ್ವಾಸ್ತ್ಯಕ್ಕೆ ಕಾರಣವಾಗಲಿ ಎಂದು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು. ಶಾಲಾ ಸಭಾಂಗಣ ಜೇಸಿ ಪಿವಿಲಿಯನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ್ ಎ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ವಿಶೇಷ ಉಪನ್ಯಾಸ ನೀಡಿದ ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಆಚಾರ್ಯ ಅಜಿತ್ ಗುರೂಜಿ ಯವರನ್ನು ಆಡಳಿತ ಮಂಡಳಿಯ ಹಾಗೂ ಶಾಲೆಯ ವತಿಯಿಂದ ಫಲ ಪುಷ್ಪ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬೇರೆಬೇರೆ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕ ಸೌಮ್ಯ, ಸಾವಿತ್ರಿ ಹಾಗೂ ರಶ್ಮಿ ಕೆ ಎನ್ ಯೋಗಭ್ಯಾಸ ತರಬೇತಿ ನಡೆಸಿಕೊಟ್ಟರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಲ್ ಎನ್ ಕೂಡೂರು, ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ತರಬೇತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಪರಿಣಾಮಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ತೇಜಸ್ವಿನಿ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಜಯರಾಮ ರೈ ರವರು ಸ್ವಾಗತಿಸಿದರು. ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ ವಂದಿಸಿದರು. ಸಹ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ತುಳಸಿ ಹಾಗೂ ದೈಹಿಕ ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ಸಂಯೋಜಿಸಿದರು.

- Advertisement -

Related news

error: Content is protected !!